ಗ್ರಾಮೀಣ ಯುವಕರಿಗೆ ಉದ್ಯಮ ತರಬೇತಿ ಅಗತ್ಯ
ಸಿ.ಎನ್.ಅಶ್ವತ್ಥ್‍ನಾರಾಯಣ ಪ್ರತಿಷ್ಠಾನದಿಂದ ಉದ್ಯಮ ಪ್ರಾರಂಭದ ಸವಾಲುಗಳು ಕುರಿತು ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಂಡರು...

ಬೆಂಗಳೂರು: ಸಿ.ಎನ್.ಅಶ್ವತ್ಥ್‍ನಾರಾಯಣ ಪ್ರತಿಷ್ಠಾನದಿಂದ ಉದ್ಯಮ ಪ್ರಾರಂಭದ ಸವಾಲುಗಳು ಕುರಿತು ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ
ಉಪನ್ಯಾಸ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಹೆಡ್ ಹೆಲ್ಡ್ ಹೈ ಸರ್ವೀಸ್ ಸಂಸ್ಥೆಯ ಸಿಇಒ ಮಾದನ್ ಪದಕಿ ಮಾತನಾಡಿ, ಹಳ್ಳಿಗಳಿಂದಲೇ ತುಂಬಿರುವ ಭಾರತದಂತಹ ದೇಶದಲ್ಲಿ ಅಲ್ಲಿಯ ಬುದಿಟಛಿವಂತರನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿ ನೀಡಿದಲ್ಲಿ ಉದ್ಯಮದಲ್ಲಿ ಹೇಗೆ ತೊಡಗಿಸಿಕೊಳ್ಳುವಂತೆ ಮಾಡಿದರೆ ದೇಶದಲ್ಲಿ ಉದ್ಯಮ ಕ್ಷೇತ್ರ ಬೆಳೆಯುತ್ತದೆ ಎಂದರು.
ನಾಸ್ಕಾಂ ಅಧ್ಯಕ್ಷ ರವಿಗುರುರಾಜ್ ಮಾತನಾಡಿ, ಉದ್ದಿಮೆಯನ್ನು ಸ್ಥಾಪನೆ ಮಾಡಬೇಕಾದರೆ ಇರುವ ಸವಾಲುಗಳು, ಅವುಗಳನ್ನು ಹೇಗೆ ಎದುರಿಸಬೇಕು. ಕೆಲಸ ಕೇಳುವುದಕ್ಕೂ ಮುನ್ನ ಕೆಲಸವನ್ನು ಕೊಡುವಷ್ಟು ಎತ್ತರಕ್ಕೆ ಬೆಳೆಯುವ ಬಗ್ಗೆ ವಿವರವಾಗಿ ಮಾತನಾಡಿದರು. ಇಯಾನ್ ಫರೀಸ್ ಮಾತನಾಡಿ, ಉದ್ದಿಮೆದಾರರು ನಾಯಕತ್ವ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮುಖ್ಯ ಎಂದರು. ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್. ಅಶ್ವತ್ಥ್‍ನಾರಾಯಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


