ಜಿಲ್ಲಾ ಸುದ್ದಿ

ಹಾಲಿನ ಲಾಭ ರೈತರಿಗೆ ವರ್ಗಾಯಿಸಿ

ಹಾಲು ಡೇರಿಗಳ ಮೇಲಿನ ಹೊರೆ ತಗ್ಗಿಸಿ, ಬರುವ ಲಾಭವನ್ನು ರಾಜ್ಯ ಸರ್ಕಾರ ನೇರವಾಗಿ ರೈತರಿಗೆ ವರ್ಗಾಯಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಡಿ.ಕೆ.ಮಾನಸ ಹೇಳಿದರು...

ಹಾಲಿನ ಲಾಭ ರೈತರಿಗೆ ವರ್ಗಾಯಿಸಿ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಹಾಲು ಡೇರಿಗಳ ಮೇಲಿನ ಹೊರೆ ತಗ್ಗಿಸಿ, ಬರುವ ಲಾಭವನ್ನು ರಾಜ್ಯ ಸರ್ಕಾರ ನೇರವಾಗಿ ರೈತರಿಗೆ ವರ್ಗಾಯಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಡಿ.ಕೆ.ಮಾನಸ
ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ಮಾರಾಟದಿಂದ ಬರುತ್ತಿರುವ ಲಾಭವನ್ನು ರೈತರಿಗೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆಂಧ್ರದಲ್ಲಿ ಹಾಲಿನ ದರ
ರು.34 ಇದ್ದರೆ, ಅದರಲ್ಲಿ ರು.27.34 ರೈತರಿಗೆ ಸಿಗುತ್ತದೆ. ತಮಿಳುನಾಡಿನಲ್ಲಿ ಹಾಲಿನ ದರ ರು.34ಗಳಷ್ಟಿದೆ. ಅದರಲ್ಲಿ ರು.28 ಹಾಲು ಪೂರೈಸುವ ರೈತರಿಗೆ ಸಿಗುತ್ತದೆ. ಹಾಲು ಮಾರಾಟದಿಂದ ಬರುವ ಲಾಭ ರೈತರಿಗೆ ಸೇರಿದ್ದೇ ಹೊರತು, ಡೇರಿಗಳಿಗಲ್ಲ. ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹೆಚ್ಚಿಸಿದಲ್ಲದೇ, ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ಆಗ್ರಹಿಸಿದರು.

ಪಕ್ಷದ ಸಹ ಸಂಚಾಲಕ ಮೋಹನ್ ಮಾತನಾಡಿ, ಧಾರವಾಡ, ರಾಯಚೂರು ಹಾಗೂ ಬಳ್ಳಾರಿಯ ಹಾಲು ಉತ್ಪಾದಕರಿಗೆ ರು.22 ನೀಡಲಾಗುತ್ತಿತ್ತು. ನಂತರ ರು.2 ಇಳಿಕೆ ಮಾಡಿ, ಬೆಲೆ ಏರಿಕೆ ನಂತರ ಮತ್ತೆ ಅದೇ ಬೆಲೆ ಏರಿಕೆ ಮಾಡಿ ಹಾಲು ಉತ್ಪಾದಕರನ್ನು ವಂಚಿಸಿದ್ದಾರೆ. ಹಾಲು ಒಕ್ಕೂಟಗಳಿಗೆ ಹಾಲಿನ ದರದ ನಿಗದಿಯಲ್ಲಿ ನಿರ್ದೇಶನ ನೀಡುವ ಸರ್ಕಾರ, ಹಾಲು ಉತ್ಪಾದಕರಿಗೆ ಹಣ ಪಾವತಿಸುವ ವಿಚಾರದಲ್ಲಿ ಏಕೆ ನಿಗದಿ ಮಾಡುವುದಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.