ಸಲಿಂಗ ಕಾಮ ನೆಪದಲ್ಲಿ ಮನೆಗಳವು ಮಾಡುತ್ತಿದ್ದವನ ಬಂಧನ
ಸಲಿಂಗ ಕಾಮದ ನೆಪದಲ್ಲಿ ಮನೆಗೆ ಹೋಗಿ ಬಳಿಕ ನಿದ್ರೆ ಮಾತ್ರೆ ಕುಡಿಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಕತರ್ನಾಕ್ ಆರೋಪಿಯೊಬ್ಬ ಹನಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು: ಸಲಿಂಗ ಕಾಮದ ನೆಪದಲ್ಲಿ ಮನೆಗೆ ಹೋಗಿ ಬಳಿಕ ನಿದ್ರೆ ಮಾತ್ರೆ ಕುಡಿಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಕತರ್ನಾಕ್ ಆರೋಪಿಯೊಬ್ಬ ಹನಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.
ಬನ್ನೇರುಗಟ್ಟ ನಿವಾಸಿ ನಾಸಿರುದ್ದೀನ್(21 ) ಬಂಧಿತ. ಆರೋಪಿ ಮೂಲತಃ ಪಶ್ಚಿಮ ಬಂಗಾಳದವನು. ಕೆಲವು ವರ್ಷಗಳಿಂದ ನಗರದ ಖಾಸಗಿ ಬ್ಯಾಂಕ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಫೇಸ್ ಬುಕ್ ನಲ್ಲಿ ಬೇರೆ ಬೇರೆ ಖಾತೆ ತೆರೆದು ಅಶ್ಲೀಲ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ. ಆ ವಿಡಿಯೋಗಳ ಕೆಳ ಭಾಗದಲ್ಲಿ ಸಲಿಂಗ ಕಾಮದಲ್ಲಿ ಆಸಕ್ತಿಯುಳ್ಳವರು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ನಮೂದಿಸುತ್ತಿದ್ದ. ತನ್ನನ್ನು ಸಂಪರ್ಕಿಸಿದವರ ವಿಳಾಸ ಪಡೆದು ರಾತ್ರಿ ವೇಳೆ ಮನೆಗೆ ಹೋಗಿ ಸಲುಗೆಯಿಂದ ನಡೆದುಕೊಂಡು ಅವರಿಗೆ ನಿದ್ರೆ ಮಾತ್ರೆ ಕುಡಿಸಿ ಬಳಿಕ ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ, ನಗದು, ದುಬಾರಿ, ವಸ್ತುಗಳನ್ನು ಮೂಟೆ ಕಟ್ಟಿ ದೋಚಿ ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿಯ ಮೋಸದ ಖೆಡ್ಡಕ್ಕೆ ಬಿದ್ದಿರುವವರಲ್ಲಿ ವಿವಾಹಿತ ಪುರುಷರೇ ಹೆಚ್ಚು. ಅದರೆ, ಇವರ್ಯಾರು ದೂರು ದಾಖಲಿಸಲು ಮುಂದಾಗಿಲ್ಲ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೊನೆಗೂ ಹನಮಂತನಗರ ನಿವಾಸಿ ಬಾಲಾಜಿ ಎಂಬುವರು ಈ ಬಗ್ಗೆ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿ ಪತ್ತೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಆರೋಪಿ ಫೇಸ್ ಬುಕ್ ಖಾತೆಗಳು, ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ ರು. 5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


