ಜಿಲ್ಲಾ ಸುದ್ದಿ

ಜನರಿಗೆ ನಾಮ ಹಾಕುವುದೇ ರಾಜಕೀಯ ಪಕ್ಷಗಳ ಕೆಲಸ

ರಾಜ್ಯದಲ್ಲಿರುವ ಮೂರು ಪಕ್ಷಗಳ ಪ್ರಣಾಳಿಕೆಗಳ ಮಾತ್ರ ಬೇರೆ ಆಗಿರುತ್ತವೆಯೇ ವಿನಃ ಆ ಎಲ್ಲಾ ಪಕ್ಷಗಳೂ ಮಾಡುವುದು ಒಂದೇ. ಅದು ಜನರಿಗೆ ಎರಡು ಬಿಳಿ ಒಂದು ಕೆಂಪು ನಾಮ ಹಾಕುವುದು!...

ಜನರಿಗೆ ನಾಮ ಹಾಕುವುದೇ ರಾಜಕೀಯ ಪಕ್ಷಗಳ ಕೆಲಸ
ನಗರದ ಗಾಂಧಿ ಭವನದಲ್ಲಿ ಭಾನುವಾರ ಮಲೆನಾಡ ಮಿತ್ರವೃಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ಗೋವಿಂದೇಗೌರಡಿರೆ ನುಡಿ-ನಮನ ಕಾರ್ಯಕ್ರಮದಲ್ಲಿ ಬಿ.ಎಲ್.ಶಂಕರ್, ಜಯಪ್ರಕಾಶ್ ಹೆಗ್ಡೆ ಹಾಗೂ ನಾಗತಿಹ
Published On :

ಬೆಂಗಳೂರು: ರಾಜ್ಯದಲ್ಲಿರುವ ಮೂರು ಪಕ್ಷಗಳ ಪ್ರಣಾಳಿಕೆಗಳ ಮಾತ್ರ ಬೇರೆ ಆಗಿರುತ್ತವೆಯೇ ವಿನಃ ಆ ಎಲ್ಲಾ ಪಕ್ಷಗಳೂ ಮಾಡುವುದು ಒಂದೇ. ಅದು ಜನರಿಗೆ ಎರಡು ಬಿಳಿ ಒಂದು ಕೆಂಪು ನಾಮ ಹಾಕುವುದು! ಇದು ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾರ್ಮಿಕ ನುಡಿ.

ಭಾನುವಾರ ಮಾಜಿ ಸಚಿವ ಗೋವಿಂದೇ ಗೌಡರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ ಕುರಿತು ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ವ್ಯಾಪಾರೀಕರಣವಾಗುತ್ತಿದ್ದು, ಎಲ್ಲದಕ್ಕೂ ಹಣವೇ ಪ್ರಧಾನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಷತ್ ಚುನಾವಣೆಗೆ ಅನೇಕ ಮಂದಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಹೀಗೆ ಹಣ ಖರ್ಚು ಮಾಡುವವಪರು ಗ್ರಾನೈಟ್, ಶಿಕ್ಷಣ ಅಥವಾ ಮೆಡಿಕಲ್ ಸಂಸ್ಥೆ ಹೊಂದಿರಬೇಕಾಗುತ್ತದೆ. ಸದನದಲ್ಲಿ ಕೂಡ ಮುಂದಿನ ದಿನಗಳಲ್ಲಿ ಚದರಡಿ ಭೂಮಿಗೆ ಎಷ್ಟು ಹಣ, ಶಿಕ್ಷಣಕ್ಕೆ ಎಷ್ಟು ಪಡೆಯಬೇಕು ಎಂಬ ಚರ್ಚೆಗಳೇ ನಡೆಯಬಹುದು ಎಂದರು.

ರಾಜಕೀಯ ವ್ಯಕ್ತಿಗಳು ಸಹ ನೈತಿಕತೆ ಬೆಳೆಸಿಕೊಳ್ಳಬೇಕಿದೆ. ನೈತಿಕತೆ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮನಸ್ಸು ಜನರಲ್ಲಿಯೂ ಬರಬೇಕು. ಪ್ರಸ್ತುತ ಸಮಾಜದಲ್ಲಿ ಈ ಎರಡು ಕೆಲಸಗಳು ಆಗುತ್ತಿಲ್ಲ. ದೇಶದ ಜನತೆ ಒಳ್ಳೆಯದನ್ನೇ ಬಯಸುತ್ತಾರೆ. ಆದರೆ ಅವರಿಗೆ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಅಷ್ಟೆ. ಗೋವಿಂದೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಮಾತ್ರವಲ್ಲ. ಅವರ ಆದರ್ಶ ಗುಣಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಪ್ರಾಮಾಣಿಕವಾಗಿ ಉಳಿಯಲು ಬಹಳ ದೊಡ್ಡ ಹೋರಾಟ ನಡೆಸಬೇಕಿದೆ. ಇಂದು ಯಶಸ್ಸಿನ ಅಳತೆಗೋಲಿನ ಹಿಂದೆ ಓಡಾಡುತ್ತಿದ್ದಾರೆ. ಚುನಾವಣೆಯಲ್ಲಿ ಎಷ್ಟು ಬಾರಿ ಗೆಲವು ಸಾಧಿಸಿದೆ. ಎಷ್ಟು ಹಣ ಮಾಡಿದೆ ಎಂಬ ಕಲ್ಪನೆ ಬೆಳೆಯುತ್ತಿದೆ. ಗೋವಿಂದೇಗೌಡರು ಚುನಾವಣೆ ಆಯೋಗ ನಿಗದಿ ಮಾಡಿದ ಅರ್ಧ ಹಣವಷ್ಟೇ ಖರ್ಚು ಮಾಡುತ್ತಿದ್ದರು ಎಂದರು.

ಗೋವಿಂದೇಗೌಡರು ಚುನಾವಣಾ ರಾಜಕೀಯ ಮಾಡದೇ ಇದ್ದಿದ್ದರಿಂದ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ವ್ಯವಸ್ಥೆಯೊಳಗೆ ಪರ್ಯಾಯ ರಾಜಕಾರಣ ಬೆಳೆಯಬೇಕಿದ್ದು, ಅದು ಸ್ವಾಭಿಮಾನದಿಂದ ಕೂಡಿರಬೇಕು. ಪ್ರಸ್ತುತ ರಾಜಕಾರಣದಲ್ಲಿ ಪ್ರಾಮಾಣಿಕ ರಾಜಕಾರಣಿ ಪ್ರಶಸ್ತಿ ನೀಡಿದರೆ ಪ್ರಾಯಶಃ ಅರ್ಜಿಗಳೇ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ವ್ಯಕ್ತಿಗಳು ತೀರಿಕೊಂಡ ಸಂದರ್ಭದಲ್ಲಿ ಆವರಿಸುವ ಶೂನ್ಯದಲ್ಲಿ ಸಂದರ್ಭದಲ್ಲಿ ಆವರಿಸುವ ಶೂನ್ಯದಲ್ಲಿ ಆ ವ್ಯಕ್ತಿಯ ಮೌಲ್ಯಗಳನ್ನು ಹುಡಕಬೇಕಿದೆ ಎಂದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.