ದುಡ್ಡಿಗಾಗಿ ಪತಿಗೇ ಚಿತ್ರಹಿಂಸೆ ನೀಡಿದಳು!
ದುಡ್ಡಿಗಾಗಿ ಅಪ್ಪ, ಅಮ್ಮನ ಜತೆ ಹೆಂಡಿಯೇ ಗಂಡನನ್ನು ಮಂಚಕ್ಕೆ ಕಟ್ಟಿ ಹಾಕಿ 2 ತಿಂಗಳು ಚಿತ್ರಹಿಂಸೆ ಪ್ರಸಂಗವಿದು. ಅತ್ತೆ, ಮಾವ, ಭಾವ, ಹೆಂಡತಿಯಿಂದ ಮನೆಯೊಳಗೆ ...

ಭಟ್ಕಳ: ದುಡ್ಡಿಗಾಗಿ ಅಪ್ಪ, ಅಮ್ಮನ ಜತೆ ಹೆಂಡಿಯೇ ಗಂಡನನ್ನು ಮಂಚಕ್ಕೆ ಕಟ್ಟಿ ಹಾಕಿ 2 ತಿಂಗಳು ಚಿತ್ರಹಿಂಸೆ ಪ್ರಸಂಗವಿದು. ಅತ್ತೆ, ಮಾವ, ಭಾವ, ಹೆಂಡತಿಯಿಂದ ಮನೆಯೊಳಗೆ ಚಿತ್ರಹಿಂಸೆ ಅನುಭವಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಬಂಧಮುಕ್ತಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ತಾಲೂಕಿನ ಮುಗ್ದಮ್ ಕಾಲನಿ ನಿವಾಸಿ ಮಹ್ಮದ್ ಆಫಾನ್ ಶೇಕ್ (27) ಯಾತನೆಗೊಳಗಾದ ವ್ಯಕ್ತಿ. ತೀವ್ರ ಅಸ್ವಸ್ಥರಾಗಿದ್ದ ಇವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ತಾಲೂಕಿನ ಗುಳ್ಮಿಯ ಜುಲೇಕಾ ಮಹಮದ್ ಅಬ್ಬಾಸ್ (40), ಅಬ್ಬಾಸ್ ತಂದೆ ಮಹ್ಮದ್ ಹಮ್ಜಾ (43), ಜಮೀಲಾ ಆಫಾನ್ (22) ಹಾಗೂ ಮಹ್ಮದ್ ಸಲೀಮ್ ಎಂಬುವರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪೈಕಿ ಜುಲೇಕಾ ಹಾಗೂ ಮಹಮದ್ ಅಬ್ಬಾಸ್ ನನ್ನು ಬಂಧಿಸಲಾಗಿದೆ. ಮಹ್ಮದ್ ಆಫಾನ್ ಶೇಕ್ ಇಲ್ಲಿನ ಮುಗ್ದಮ್ ಕಾಲನಿ ನಿವಾಸಿ ಯಾಗಿದ್ದು, ಎರಡು ವರ್ಷಗಳ ಹಿಂದಷ್ಟೇ ಗುಳ್ಮಿಯ ಯುವತಿಯೊಂದಿಗೆ ಮದುವೆಯಾಗಿದೆ. ಪತ್ನಿ ಮಾತಿಗೆ ಕಟ್ಟುಬಿದ್ದು ಮನೆ ಅಳಿಯನಾದ ಇವರನ್ನು ಹಣಕ್ಕಾಗಿ ಪೀಡಿಸಿದ್ದಾರೆ.
ಇವರ ಕಾಟ ತಾಳಲಾರದೇ ವಿಜಯವಾಡಕ್ಕೆ ತೆರಳಿ ಹೊಟೆಲ್ ಕೆಲಸಕ್ಕೆ ಸೇರಿದ್ದರು. ಆಗ ಇವರು ಕಾಣೆಯಾಗಿದ್ದಾರೆಂದು ಅತ್ತೆ, ಮಾವ ಪೊಲೀಸರಿಗೆ ದೂರು ನೀಡಿ ಭಟ್ಕಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಮತ್ತೆ ಮನೆಯಿಂದ ಹೊರಗೆ ಬಿಡದೆ ಚಿತ್ರಹಿಂಸೆ ನೀಡಲಾಗಿದೆ. ಬೆನ್ನ ಮೇಲೆ ಬರೆ ಹಾಕಿ, 2 ತಿಂಗಳಿಂದ ಮಂಚದ ಕೆಳಗೆ ಕಟ್ಟಿಹಾಕಿ ಕ್ರೂರವಾಗಿ ನಡೆಸಿಕೊಂಡಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


