ಜಿಲ್ಲಾ ಸುದ್ದಿ

ಗಂಟಲು ಕ್ಯಾನ್ಸರ್ ನಿಂದ ಧ್ವನಿ ಕಳೆದುಕೊಂಡವರಿಗೆ 'ಓಂ' ಕೃತಕಾಂಗ

ಗಂಟಲು ಕ್ಯಾನ್ಸರ್ ನಿಂದ ಧ್ವನಿಯನ್ನು ಕಳೆದುಕೊಂಡವರು ಕೃತಕ ಧ್ವನಿ ಪೆಟ್ಟಿಗೆ ಮೂಲಕ ಪುನಃ ತಮ್ಮ ಧ್ವನಿಯನ್ನು ವಾಪಸ್ ಪಡೆಯಬಹುದಾಗಿದೆ. ಅದೂ ಅಗ್ಗದ ದರದಲ್ಲಿ.

ಗಂಟಲು ಕ್ಯಾನ್ಸರ್ ನಿಂದ ಧ್ವನಿ ಕಳೆದುಕೊಂಡವರಿಗೆ 'ಓಂ' ಕೃತಕಾಂಗ
ಕೃತಕ ಧ್ವನಿ ಪೆಟ್ಟಿಗೆ(ಸಂಗ್ರಹ ಚಿತ್ರ)
Published On :

ಬೆಂಗಳೂರು: ಗಂಟಲು ಕ್ಯಾನ್ಸರ್ ನಿಂದ ಧ್ವನಿಯನ್ನು ಕಳೆದುಕೊಂಡವರು ಕೃತಕ ಧ್ವನಿ ಪೆಟ್ಟಿಗೆ ಮೂಲಕ ಪುನಃ ತಮ್ಮ ಧ್ವನಿಯನ್ನು ವಾಪಸ್ ಪಡೆಯಬಹುದಾಗಿದೆ. ಅದೂ ಅಗ್ಗದ ದರದಲ್ಲಿ.
ಬೆಂಗಳೂರು ಮೂಲದ ಶಿರ ಮತ್ತು ಕಟ್ಟು ಶಾಸ್ತ್ರಜ್ಞ ಡಾ.ವಿಶಾಲ್ ರಾವ್ ಸಿಲಿಕೋನ್ ನಿಂದ ತಯಾರಿಸಲಾದ ವಾಯ್ಸ್ ಬಾಕ್ಸ್ ಕೃತಕಾಂಗವನ್ನು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ಗಂಟಲು ಕ್ಯಾನ್ಸರ್ ನಿಂದ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡವರು ಪುನಃ ಮಾತನಾಡಬಹುದಾಗಿದೆ.  
"ಮಾತಾಡುವುದು ಮನುಷ್ಯನ ಹಕ್ಕು, ಕಾರ್ಯಮ್ರಮದಲ್ಲಿ ಮಾತನಾಡಿದ ಡಾ.ವಿಶಾಲ್ ರಾವ್, ಗಂಟಲಿನ ಕ್ಯಾನ್ಸರ್ ನ ರೋಗಿಗಳಿಗೆ ಇರುವ ಪ್ರಮುಖ ಸಮಸ್ಯೆ ಎಂದರೆ ಅವರು ಲ್ಯಾರಿಂಜೆಕ್ಟಮಿ ಮಾಡಿಸಿಕೊಂಡಾಗ, ಶಸ್ತ್ರಕ್ರಿಯೆಯಿಂದ ಅವರ ಲ್ಯಾರಿಂಕ್ಸ್ ಅನ್ನು ತೆಗೆದಾಗ ಅವರ ಧ್ವನಿ ಪೆಟ್ಟಿಗೆಯನ್ನು ತೆಗೆಯಲಾಗುತ್ತದೆ. ಲ್ಯಾರಿಂಕ್ಸ್ ನಲ್ಲಿ ಧ್ವನಿ ಹುರಿ ಇರುವುದರಿಂದ ಮತ್ತು ಇದರಿಂದಲೇ ಧ್ವನಿ ಬರುವುದರಿಂದ ಧ್ವನಿ ಇಲ್ಲವಾಗುತ್ತದೆ. ಲ್ಯಾರಿಜೆಕ್ಟಮಿ ರೋಗಿಗಳು ಮಾತನಾಡುವಂತೆ ಮಾಡಲು ಏಕಮಾರ್ಗೀಯ ಕವಾಟು ಇರುವಂಥ ಒಂದು ಸುಧಾರಿತ ಉಪಕರಣ ಅಗತ್ಯವಿತ್ತು ಎಂದಿದ್ದಾರೆ.
ಇದರ ಬಗ್ಗೆ ಸಂಶೋಧನೆ ನಡೆಸಿದ್ದು ಕೃತಕ ವಾಯ್ಸ್ ಬಾಕ್ಸ್ ತಯಾರಿಸಲಾಗಿದ್ದು ಇದಕ್ಕೆ ಓಂ ಎಂದು ಕರೆಯಲಾಗಿದೆ. ಧ್ವನಿ ಪೆಟ್ಟಿಗೆ ಅನ್ನನಾಳದ ಮೂಲಕ  ಶ್ವಾಸಕೋಶದಲ್ಲಿ ಗಾಳಿಯು ಹರಿದಾಗ, ಇದು ಕಂಪಿಸಿ ಧ್ವನಿ ಮಾಡುತ್ತದೆ ಮತ್ತು ಮೆದುಳಿನ ಸಹಯೋಗದಿಂದ ಇದನ್ನು ಅರ್ಥಮಾಡಿಕೊಳ್ಳಬಲ್ಲ ಮಾತನ್ನಾಗಿ ಪರಿವರ್ತಿಸಲಾಗುತ್ತದೆ. ನೀರು ಅಥವಾ ಆಹಾರ ಶ್ವಾಸಕೋಶಗಳನ್ನು ಸೇರಬಾರದ್ದಾದರಿಂದ ಇದು ಏಕಮಾರ್ಗೀಯ ಕವಾಟಗಿರುತ್ತದೆ ಎಂದು ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.
ಡಾ. ವಿಶಾಲ್ ರಾವ್ ಇದನ್ನು ಕೇವಲ ರು.50ಕ್ಕೆ ಲಭ್ಯವಾಗುವಂತೆ ಮಾಡಿದ್ದಾರೆ. ಬರೀ 25ಗ್ರಾಂ ತೂಕವಿರುವ ಈ ಉಪಕರಣ ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.