ಕೆಪಿಎಸ್ ಮೇಲ್ಮನವಿ ಅರ್ಜಿ ವಜಾ, ನಿಯಮ ಪೂರ್ವಾನ್ವಯಗೊಳಿಸದಂತೆ ಸೂಚನೆ
ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ 2012 ರಲ್ಲಿ ಕೇಂದ್ರ ಸರ್ಕಾರವು ಲೋಕಸೇವಾ ಆಯೋಗದ ನಿಯಮಕ್ಕೆ ತಂದಿರುವ ತಿದ್ದುಪಡಿಯು ಪೂರ್ವಾನ್ವಯವಾಗುವುದಿಲ್ಲ

ಬೆಂಗಳೂರು: ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ 2012 ರಲ್ಲಿ ಕೇಂದ್ರ ಸರ್ಕಾರ ಲೋಕಸೇವಾ ಆಯೋಗದ ನಿಯಮಕ್ಕೆ ತಂದಿರುವ ತಿದ್ದುಪಡಿಯು ಪೂರ್ವಾನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕೆಎಎಸ್ ನಿಂದ ಬಡ್ತಿ ಪಡೆದಿದ್ದ ಮೂವರು ಐಎಎಸ್ ಅಧಿಕಾರಿಗಳಾದ ಎಫ್.ಆರ್ ಜಮಾ ದಾರ್, ವಿ ಶಂಕರ್, ವಿ ಶ್ರೀರಾಮ ರೆಡ್ಡಿ ಅವರ ಜೇಷ್ಠತೆ ನಿರ್ಣಯಕ್ಕೆ ಸಂಬಂಧಿಸಿದಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್, ಕೇಂದ್ರ ಲೋಕಸೇವಾ ಆಯೋಗದ ಮೇಲ್ಮನವಿ ಅರ್ಜಿ ವಜಾಗೊಳಿಸಿದೆ.
ತಿದ್ದುಪಡಿ ನಂತರದ ನೇಮಕಗಳಿಗೆ ಹೊಸ ನಿಯಮ ಜಾರಿ ಮಾಡಬೇಕು. ಆದರೆ ಹಿಂದಿನ ನೇಮಕಗಳಿಗೆ ಪೂರ್ವಾನ್ವಯಿಸಿ ಜೇಷ್ಠತೆ ಪಟ್ಟಿ ತಯಾರಿಸಬಾರದು ಎಂದು ಹೈಕೋರ್ಟ್ ನ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಕಳೆದ 2008 ಹಾಗೂ 2009 ರ ಖಾಲಿ ಹುದ್ದೆಗಳಿಗೆ ಸಂಬಂಧಿಸಿ 2012 ರಲ್ಲಿ ಮೂವರು ಅಧಿಕಾರಿಗಳನ್ನು ಕೆಎಎಸ್ ನಿಂದ ಐಎಎಸ್ ಗೆ ಬಡ್ತಿ ನೀಡಲಾಗಿತ್ತು.
ಹಾಗೆಯೇ ಅವರಿಗೆ ಜೇಷ್ಠತಾ ಪಟ್ಟಿ ಪ್ರಕಟಿಸುವಾಗ ಒಂದು ವರ್ಷ ವಿಳಂಬ ಮಾಡಲಾಗಿತ್ತು. 1987 ರ ನಿಯಮದ ಪ್ರಕಾರ ಜಮಾದಾರ್ ಅವರಿಗೆ 2000 ಹಾಗೂ ಶಂಕರ ಮತ್ತು ರೆಡ್ಡಿ ಅವರಿಗೆ 2001 ರಿಂದ ಜೇಷ್ಠತಾ ಪಟ್ಟಿ ಅನ್ವಯವಾಗುತ್ತಿತ್ತು. 2012 ರ ತಿದ್ದುಪಡಿ ನಿಯಮದ ಪ್ರಕಾರ ಇದು ಒಂದು ವರ್ಷ ವಿಳಂಬವಾಗುತ್ತಿತ್ತು. ಆದರೆ ಪೂರ್ವಾನ್ವಯ ಮಾಡಿ ಕೇಂದ್ರ ಲೋಕಸೇವಾ ಆಯೋಗವು 1 ವರ್ಷ ವಿಳಂಬದ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಈ ಮೂವರು ಅಧಿಕಾರಿಗಳು ಸಿಎಟಿ ಮೊರೆ ಹೋಗಿದ್ದರು. ಅಧಿಕಾರಿಗಳ ಅರ್ಜಿ ಮಾನ್ಯ ಮಾಡಿದ್ದ ಸಿಎಟಿ, ತಿದ್ದುಪಡಿಯೂ ಪೂರ್ವಾನ್ವಯವಾಗಲಾರದು ಎಂದು ಹೇಳಿತ್ತು. ಸಿಎಟಿ ಆದೇಶವನ್ನು ಪ್ರಶ್ನಿಸಿ ಕೇಂದ್ರ ಲೋಕಸೇವಾ ಆಯೋಗವು ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


