ಜಿಲ್ಲಾ ಸುದ್ದಿ

ಮೆಟ್ರೋ ಕಾಮಗಾರಿಗೆ ಬದಲಾಯಿತು ಸಂಚಾರ

ಕೆ.ಆರ್.ಜಂಕ್ಷನ್‍ನಲ್ಲಿ ಮೆಟ್ರೋ ಕಾಮಗಾರಿ ಶುರು ನಗರದ ಕೆ.ಆರ್.ರಸ್ತೆ ಮೆಡಿಕಲ್ ಜಂಕ್ಷನ್ ನಿಂದ ಕೆ.ಆರ್.ಜಂಕ್ಷನ್ (ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ)ವರೆಗೆ ...

ಮೆಟ್ರೋ ಕಾಮಗಾರಿಗೆ ಬದಲಾಯಿತು ಸಂಚಾರ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಕೆ.ಆರ್.ಜಂಕ್ಷನ್‍ನಲ್ಲಿ ಮೆಟ್ರೋ ಕಾಮಗಾರಿ ಶುರು ನಗರದ ಕೆ.ಆರ್.ರಸ್ತೆ ಮೆಡಿಕಲ್ ಜಂಕ್ಷನ್ ನಿಂದ ಕೆ.ಆರ್.ಜಂಕ್ಷನ್ (ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ)ವರೆಗೆ ಬೆಂಗಳೂರು ಮೆಟ್ರೋ ರೈಲು ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಸಲುವಾಗಿ ಕೆ.ಆರ್ ರಸ್ತೆಯಲ್ಲಿ (ಮೆಡಿಕಲ್ ಕಾಲೇಜು ಜಂಕ್ಷನ್‍ನಿಂದ ಕೆ. ಆರ್ ಪಾಯಿಂಟ್ ವರೆಗೆ) ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ
ತಿಳಿಸಿದೆ.

ಕೆ.ಆರ್.ರಸ್ತೆ, ಪ್ರೊ.ಶಿವಶಂಕರಪ್ಪ ವೃತ್ತದಿಂದ ಈ ಮಾರ್ಗದಲ್ಲಿ ಚಲಿಸುವ ವಾಹನ ಚಾಲಕರು ಅಥವಾ ಸವಾರರು ಮೆಡಿಕಲ್ ಕಾಲೇಜು ಜಂಕ್ಷನ್‍ನಲ್ಲಿ ಬಲತಿರುವ ಪಡೆದು ಚಲಿಸಬೇಕು. ಮಿಂಟೋ ವೃತ್ತದಿಂದ ಬರುವ ವಾಹನಗಳು ಮೆಡಿಕಲ್ ಕಾಲೇಜು ಜಂಕ್ಷನ್‍ಬಳಿ ನೇರವಾಗಿ ಎಂ.ವಿ.ರಸ್ತೆಯಲ್ಲಿ ಚಲಿಸಿ ಬಿ-ಸ್ಟ್ರೀಟ್‍ನಲ್ಲಿ ಎಡ ತಿರುವು ಪಡೆದು ನಂತರ ಐ ರಸ್ತೆಯ ಜಂಕ್ಷನ್ ಬಳಿ ಎಡ ತಿರುವ ಪಡೆದು ಕೆ.ಆರ್ ಮಾರ್ಕೆಟ್ ಕಡೆಗೆ ಸಾಗಬೇಕು ಮತ್ತು ಬಲತಿರುವು ಪಡೆದು ಕಲಾಸಿಪಾಳ್ಯ ಬಸ್ ನಿಲ್ದಾಣದ ಕಡೆಗೆ ಸಾಗಬೇಕು.

ಕೆ.ಪಿ ಮುಖ್ಯರಸ್ತೆಯಲ್ಲಿ ಬಸಪ್ಪ ವೃತ್ತದಿಂದ ಕೆ.ಪಿ ಪಾಯಿಂಟ್‍ವರೆಗೆ ಈ ಹಿಂದೆ ಇದ್ದ ದ್ವಿಮುಖ ಸಂಚಾರವನ್ನು ಈಗ ತಾತ್ಕಾಲಿಕವಾಗಿ ಏಕಮುಖ ಸಂಚಾರವಾಗಿ ಮಾರ್ಪಡಿಸಲಾಗಿದೆ ಹಾಗೂ ಈ ರಸ್ತೆಗಳ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಹಾಗಾಗಿ ಸಾರ್ವಜನಿಕರು ಈ ಸಂಚಾರ ಬದಲಾವಣೆಗೆ ಸಹಕರಿಸಬೇಕೆಂದು ಆಯುಕ್ತರು ಕೋರಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.