ಜಿಲ್ಲಾ ಸುದ್ದಿ

ಅದೃಷ್ಟದ ಚೊಂಬು ಎಂದು ಜನರನ್ನು ವಂಚಿಸುತ್ತಿದ್ದ 10 ಮಂದಿ ಬಂಧನ

ಅದೃಷ್ಟದ ಚೊಂಬು ತೋರಿಸಿ ಜನರಿಗೆ ಮಂಕು ಬೂದಿ ಎರಚುತ್ತಿದ್ದ 10 ಮಂದಿ ವಂಚಕರನ್ನು ಪೊಲೀಸರು ಬುಧವಾರ...

ಅದೃಷ್ಟದ ಚೊಂಬು ಎಂದು ಜನರನ್ನು ವಂಚಿಸುತ್ತಿದ್ದ 10 ಮಂದಿ ಬಂಧನ
ಸಾಂದರ್ಭಿಕ ಚಿತ್ರ
Published On :
ಮೈಸೂರು: ಅದೃಷ್ಟದ ಚೊಂಬು ತೋರಿಸಿ ಜನರಿಗೆ ಮಂಕು ಬೂದಿ ಎರಚುತ್ತಿದ್ದ 10 ಮಂದಿ ವಂಚಕರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅದೃಷ್ಟದ ಚೊಂಬು ಮನೆಯಲ್ಲಿಟ್ಟುಕೊಂಡು ಪೂಜೆಸಿದರೆ ಅದೃಷ್ಟ, ಆರೋಗ್ಯ, ಐಶ್ವರ್ಯ ಲಭಿಸುತ್ತದೆ ಎಂದು ಹೇಳಿ ಖಾಸಗಿ ಕಂಪನಿಯ ಸಿಇಓ ಒಬ್ಬರಿಗೆ ವಂಚನೆ ಮಾಡಲು ಯತ್ನಿಸುತ್ತಿದ್ದ ವೇಳೆ 10 ಮಂದಿಯನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಕೊಳ್ಳೇಗಾಲದ ಹರೀಶ, ಬೆಂಗಳೂರಿನ ಮಾದೇವನಾಯ್ಕ, ವಿದ್ಯಾರಣ್ಯಪುರಂನ ಬಾಬುರಾಜು, ಶಿವಪ್ಪ, ಚಿಕ್ಕಬಳ್ಳಾಪುರದ ವರದರಾಜು, ಆಂಧ್ರದ ಉಮಾಮಹೇಶ್ವರನಾಯ್ಡು, ತಿರುಪತಿಯ ಮದನ್ ಮೋಹನ್, ಕೇರಳದ ಜೈಕೃಷ್ಣ, ಉಡುಪಿಯ ಪ್ರವೀಣ್ ಕುಮಾರ್ ಹಾಗೂ ರಮೇಶ್ ಬಂಧಿತ ಆರೋಪಿಗಳು.
ಸುರೇಂದ್ರ ಎಂಬುವರಿಗೆ ಅಕ್ಷಯದ ಚೊಂಬು ನೀಡಿ ವಂಚಿಸಲು ಯತ್ನಿಸಲು ಮುಂದಾಗಿದ್ದರು. ಈ ಮಾಹಿತಿ ದೊರೆತ ಪೊಲೀಸರು ದಾಳಿ ನಡೆಸಿ ಆರೋಪಿಗಳು ಬಂಧಿಸಿದ್ದಾರೆ. 
ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಸಿಇಒ ಆಗಿರುವ ಸುರೇಂದ್ರ ಎಂಬುವರಿಗೆ ಅದೃಷ್ಟದ ಚೊಂಬು ನೀಡಿ ವಂಚಿಸಲು ಯತ್ನಿಸುತ್ತಿದ್ದಾಗ ದೊರೆತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 
ಪ್ರವೀಣ್ ಕುಮಾರ್ ಹಾಗೂ ರಮೇಶ್ ತನ್ನ ಸ್ನೇಹಿತರೇ ಆಗಿದ್ದ ಸುರೇಂದ್ರ ಅವರನ್ನು ವಂಚಿಸಲು ಮುಂದಾಗಿದ್ದರು. ತಮ್ಮ ಸ್ನೇಹಿತನ ಬಳಿ ಅದೃಷ್ಟದ ಚೊಂಬಿದೆ. ಅದನ್ನು ಮನೆಯಲ್ಲಿ ತಂದಿಟ್ಟುಕೊಂಡು ಪೂಜಿಸಿದರೆ ಐಶ್ವರ್ಯ, ಅದೃಷ್ಟು ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಅದರ ಬೆಲೆ 1 ಕೋಟಿ. ಆದರೆ ನಿನಗಾಗಿ ಅದನ್ನು ರು.60ಲಕ್ಷಕ್ಕೆ ಕೊಡಿಸುತ್ತೇನೆ ಎಂದು ನಂಬಿಸಿದ್ದರು. ಅದರಂತೆ ಕಾರಿನಲ್ಲಿ ಕುಳಿತು ಚೊಂಬನ್ನು ಪರೀಕ್ಷಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಚೊಂಬು, ಅಕ್ಕಿಕಾಳಿನ ಪೆಟ್ಟಿಗೆ ಮತ್ತು ಕಾರನ್ನ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.