ಭೂಗಳ್ಳರ ಜತೆ ಗುರುತಿಸಿಕೊಳ್ಳಬೇಡಿ: ಜಿ.ಪರಮೇಶ್ವರ್
`ಕೋಟ್ಯಾಧಿಪತಿಗಳಾಗಲು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಭೂಗಳ್ಳರ ಜೊತೆ ಪೊಲೀಸ್ ಅಧಿಕಾರಿಗಳು ಗುರುತಿಸಿಕೊಳ್ಳಬಾರದು. ಅಷ್ಟೇ ಅಲ್ಲ, ಅವರಿಗೆ ಸಹಾಯವನ್ನೂ ಮಾಡ ಬಾರದು' ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸಲಹೆ ನೀಡಿದರು...

ಬೆಂಗಳೂರು: `ಕೋಟ್ಯಾಧಿಪತಿಗಳಾಗಲು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಭೂಗಳ್ಳರ ಜೊತೆ ಪೊಲೀಸ್ ಅಧಿಕಾರಿಗಳು ಗುರುತಿಸಿಕೊಳ್ಳಬಾರದು. ಅಷ್ಟೇ ಅಲ್ಲ, ಅವರಿಗೆ ಸಹಾಯವನ್ನೂ ಮಾಡ ಬಾರದು' ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸಲಹೆ ನೀಡಿದರು.
ಯಶವಂತಪುರ ಕ್ಷೇತ್ರದ ಬ್ಯಾಡರಹಳ್ಳಿಯ ನೂತನ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಜ್ಯಕ್ಕೆ ಭೂಮಾಫಿಯಾ ಒಂದು ಪೀಡುಗಾಗಿ ಕಾಡುತ್ತಿದೆ. ಇದನ್ನು ಮಟ್ಟ ಹಾಕುವ ಅಗತ್ಯವಿದೆ. ಇಂತಹ ಸಮಾಜಘಾತುಕ ಶಕ್ತಿಗಳಿಗೆ ಯಾರೂ ಬೆಂಗಾವಲಾಗಿ ನಿಲ್ಲಬಾರದು ಎಂದು ತಿಳಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಇರಬೇಕು. ಸಮಾಜದಲ್ಲಿ ಕಾನೂನು ವಿರೋಧಿ ಚಟುವಟಿಕೆ ನಡೆಸುವವರು ಹೆಚ್ಚುತ್ತಿದ್ದಾರೆ. ಇವರ ನಿಯಂತ್ರಣವಾಗಲೇ ಬೇಕು ಎಂದ ಅವರು, ಈಗಾಗಲೇ 8,000 ಪೇದೆಗಳ ನೇಮಕವಾಗಿದ್ದು, ಸದ್ಯದಲ್ಲೇ ಇನ್ನೂ 8,000 ಪೇದೆಗಳು ಹಾಗೂ 460 ಸಬ್ ಇನ್ಸ್ ಪೆಕ್ಟರ್‍ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರ ಒಂದು ವರ್ಷದ ಪ್ರಯತ್ನದಿಂದ ಠಾಣೆ ಉದ್ಘಾಟನೆಯಾಗಿದೆ. ಹೇರೋಹಳ್ಳಿ ವಾರ್ಡ್‍ಗೆ ಒಳಚರಂಡಿ ಹಾಗೂ ಇತರೆ ಅಭಿವೃದ್ಧಿಗೆ ರು.40 ಕೋಟಿ, ನಗರೋತ್ಥಾನದಲ್ಲಿ ರು.34 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಸಂಸದ ಡಿ.ಕೆ. ಸುರೇಶ್, ಸಚಿವ ಜಾರ್ಜ್ ಮಾತನಾಡಿದರು. ಆರ್ ಆರ್ ನಗರದ ಶಾಸಕ ಮುನಿರತ್ನ, ರಾಮನಗರ ಎಸ್ಪಿ ಡಾ ಚಂದ್ರಗುಪ್ತ, ಬ್ಯಾಡರಹಳ್ಳಿ ಸರ್ಕಲ್ ಇನ್ಸ್‍ಪೆಕ್ಟರ್ ರವಿಕುಮಾರ್, ಬಿಬಿಎಂಪಿ ಸದಸ್ಯ ರಾಜಣ್ಣ, ವಾಸುದೇವ್, ಆರ್ಯ
ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


