ಜಿಲ್ಲಾ ಸುದ್ದಿ

ಸ್ಫೋಟಗೊಂಡ ಟಾಟಾ ಏಸ್ : ಇಬ್ಬರ ದುರ್ಮರಣ

ಟಾಟಾ ಏಸ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಬೆಳಗಾವಿಯ ಭಾತಕಾಂಡೆ ಶಾಲೆಯ ಪಕ್ಕದಲ್ಲಿ ಎಸ್.ಪಿ.ಎಂ. ರಸ್ತೆಯಲ್ಲಿ ನಡೆದಿದೆ....

ಸ್ಫೋಟಗೊಂಡ ಟಾಟಾ ಏಸ್ : ಇಬ್ಬರ ದುರ್ಮರಣ
ಸ್ಫೋಟಗೊಂಡ ಟಾಟಾ ಏಸ್ ವಾಹನ
Published On :

ಬೆಳಗಾವಿ: ಟಾಟಾ ಏಸ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಬೆಳಗಾವಿಯ ಭಾತಕಾಂಡೆ ಶಾಲೆಯ ಪಕ್ಕದಲ್ಲಿ ಎಸ್.ಪಿ.ಎಂ. ರಸ್ತೆಯಲ್ಲಿ  ನಡೆದಿದೆ.

ಕಾರ್ಖಾನೆಗಳಿಗೆ ಬಳಸುವ ರಾಸಾಯನಿಕ ವಸ್ತುವನ್ನು ಸಾಗಿಸುತ್ತಿದ್ದ ಟಾಟಾ ಏಸ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಐವರು ಗಾಯಗೊಂಡಿದ್ದಾರೆ.

ಶೆಟ್ಟಿಗಲ್ಲಿ ನಿವಾಸಿಯಾದ ಬೈಕ್ ಸವಾರ ರಾಜೇಂದ್ರ ಬಾಬುರಾವ್ ಪಾಟೀಲ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಮತ್ತೊಬ್ಬರು ಆಸ್ಪತ್ರಯೆಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಐವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಟಾ ಏಸ್ ವಾಹನ ಸ್ಫೋಟಗೊಂಡಿದ್ದರಿಂದ ಪಕ್ಕದಲ್ಲಿದ್ದ ಕಾರು ಹಾಗೂ ಐದು ಬೈಕ್ ಜಖಂಗೊಂಡಿದೆ. ಟಾಟಾ ಏಸ್ ವಾಹನದ ಬಿಡಿಭಾಗಗಳು ಸಿಡಿದು ಚೆಲ್ಲಾಪಿಲ್ಲಿಯಾಗಿವೆ.

ಶ್ವಾನದಳ, ಎಸ್.ಎಫ್.ಎಲ್. ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಟಾಟಾ ಏಸ್ ವಾಹನದಲ್ಲಿನ ಸಿಲಿಂಡರಿಗೆ ಬೆಂಕಿ ತಗುಲಿ ಸ್ಫೋಟಗೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.