ಜಿಲ್ಲಾ ಸುದ್ದಿ

ಕಾರವಾರದಲ್ಲಿ ಕಣಿವೆಗೆ ಉರುಳಿದ ಟ್ಯಾಂಕರ್: ಇಬ್ಬರ ದುರ್ಮರಣ

ಗ್ಯಾಸೋಲಿನ್ ಹೊತ್ತೊಯ್ಯುತಿದ್ದ ಟ್ಯಾಂಕರ್ ಕಣಿವೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ...

ಕಾರವಾರದಲ್ಲಿ ಕಣಿವೆಗೆ ಉರುಳಿದ ಟ್ಯಾಂಕರ್: ಇಬ್ಬರ ದುರ್ಮರಣ
ಸಾಂದರ್ಭಿಕ ಚಿತ್ರ
Published On :
ಕಾರವಾರ: ಗ್ಯಾಸೋಲಿನ್ ಹೊತ್ತೊಯ್ಯುತಿದ್ದ ಟ್ಯಾಂಕರ್ ಕಣಿವೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಕಾರವಾರದಲ್ಲಿ ನಡೆದಿದೆ.
ಕಾರವಾರ ತಾಲ್ಲೂಕಿನ ಚೆಂಡಿಯಾ ಹಳ್ಳಿ ಬಳ್ಳಿ ರಾಷ್ಟ್ರೀಯ ಹೆದ್ದಾರಿ 66 ಈ ಘಟನೆ ಸಂಭವಿಸಿದೆ. ಟ್ಯಾಂಕರ್ ಚಾಲಕ ಪುಶ್ಪರಾಜ್ ಮನಪ್ಪ ಪೂಜಾರಿ(31), ಕ್ಲೀನರ್ ಸಂತೋಷ್ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಪುಷ್ಪರಾಜ್ ಮಂಗಳೂರಿನ ವಿದ್ಯಾನಗರದ ನಿವಾಸಿಯಾಗಿದ್ದು, ಸಂತೋಷ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಚಾರ್ಮಡಿ ಹಳ್ಳಿಯವರಾಗಿದ್ದಾರೆ.
ವೇಗವಾಗಿ ಚಾಲನೆ ಮಾಡುತ್ತಿದ್ದ ಟ್ಯಾಂಕರ್ ಚಾಲಕ ತಿರುವಿನಲ್ಲಿ ಎದುರು ಬರುತ್ತಿದ್ದ ಬಸ್ ಗೆ ಸ್ಥಳವಕಾಶ ಮಾಡಲು ಮುಂದಾದಾಗ ನಿಯಂತ್ರಣ ತಪ್ಪಿ ಟ್ಯಾಂಕರ್ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ನಂತರ ಕಣಿವೆಗೆ ಉರುಳಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.