ಜಿಲ್ಲಾ ಸುದ್ದಿ

ಸಿಯಾಚಿನ್ ನಲ್ಲಿ ಮಡಿದ ಮತ್ತಿಬ್ಬರು ಯೋಧರ ಪಾರ್ಥೀವ ಶರೀರ ಬರೋದು ಯಾವಾಗ?

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಯೋಧ ಪಿ.ಎನ್‌. ಮಹೇಶ್‌ ಹಾಗೂ ಹಾಸನ ತಾಲೂಕು ತೇಜೂರು ಗ್ರಾಮದ ಟಿ.ಟಿ.ನಾಗೇಶ್‌ ಅವರ ಮೃತದೇಹಗಳು ಇನ್ನೂ ಕುಟುಂಬದವರಿಗೆ ಸಿಕ್ಕಿಲ್ಲ...

ಸಿಯಾಚಿನ್ ನಲ್ಲಿ ಮಡಿದ ಮತ್ತಿಬ್ಬರು ಯೋಧರ ಪಾರ್ಥೀವ ಶರೀರ ಬರೋದು ಯಾವಾಗ?
ಸಾಂದರ್ಭಿಕ ಚಿತ್ರ
Published On :

ಹಾಸನ/ಮೈಸೂರು: ಗಡಿಭಾಗ ಸಿಯಾಚಿನ್‌ನಲ್ಲಿ ನಡೆದ ಭೀಕರ ಹಿಮಪಾತದಲ್ಲಿ ಕರ್ನಾಟಕದ ಮೂವರು ಯೋಧರು ಸಾವನ್ನಪ್ಪಿದ್ದು. ಧಾರವಾಡ ತಾಲೂಕಿನ ಕುಂದುಗೋಳದ ಬೆಟದೂರು ಮೃತಯೋಧ ಲ್ಯಾನ್ಸ್‌ ನಾಯ್ಕ್ ಹನುಮಂತಪ್ಪ ಕೊಪ್ಪದ್‌ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತಲುಪಿದೆ.

ದುರಂತ ಎಂದರೆ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಯೋಧ ಪಿ.ಎನ್‌. ಮಹೇಶ್‌ ಹಾಗೂ  ಹಾಸನ ತಾಲೂಕು ತೇಜೂರು ಗ್ರಾಮದ ಟಿ.ಟಿ.ನಾಗೇಶ್‌ ಅವರ ಮೃತದೇಹಗಳು ಇನ್ನೂ ಕುಟುಂಬದವರಿಗೆ ಸಿಕ್ಕಿಲ್ಲ.

ಸಿಯಾಚಿನ್‌ ಹಿಮಪಾತದಲ್ಲಿ ಮೃತಪಟ್ಟ ಹಾಸನ ತಾಲೂಕು ತೇಜೂರು ಗ್ರಾಮದ ಟಿ.ಟಿ.ನಾಗೇಶ್‌ ಅವರ ಮೃತದೇಹ ಇನ್ನೂ ಸಿಯಾಚಿನ್‌ನಲ್ಲೇ ಇದ್ದು, 2-3 ದಿನಗಳಲ್ಲಿ ತವರಿಗೆ ಬರುವ ನಿರೀಕ್ಷೆಯಿದೆ. ಅವರ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿನಲ್ಲಿ ಸಕಲ ವ್ಯವಸ್ಥೆ ಮಾಡಿಕೊಂಡಿರುವ ಕುಟುಂಬ ಸದಸ್ಯರು, ಮೃತದೇಹಕ್ಕಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.