ಜಿಲ್ಲಾ ಸುದ್ದಿ

ಹನುಮಂತಪ್ಪ ಹುತಾತ್ಮ ಹಿನ್ನೆಲೆ ಬೆಟದೂರಿನ ಚುನಾವಣೆ ಮುಂದಕ್ಕೆ

ವೀರಯೋಧ ಹನುಮಂತಪ್ಪ ಕೊಪ್ಪದ್ ಹುತಾತ್ಮ ಹಿನ್ನಲೆಯಲ್ಲಿ ನಾಳೆ ಬೆಟದೂರಿನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು...

ಹನುಮಂತಪ್ಪ ಹುತಾತ್ಮ ಹಿನ್ನೆಲೆ ಬೆಟದೂರಿನ ಚುನಾವಣೆ ಮುಂದಕ್ಕೆ
ಸಾಂದರ್ಭಿಕ ಚಿತ್ರ
Published On :
ಹುಬ್ಬಳ್ಳಿ: ವೀರಯೋಧ ಹನುಮಂತಪ್ಪ ಕೊಪ್ಪದ್ ಹುತಾತ್ಮ ಹಿನ್ನಲೆಯಲ್ಲಿ ನಾಳೆ ಬೆಟದೂರಿನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳು ತಾಲ್ಲೂಕಿನ ಬೆಟದೂರಿನಲ್ಲಿ ನಾಳೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ, ಸಿಯಾಚಿನ್ ಹಿಮಪಾತದಲ್ಲಿ ಮೃತಪಟ್ಟ ಯೋಧ ಹನುಮಂತಪ್ಪ ಕೊಪ್ಪದ್ ಅವರ ಅಂತ್ಯಕ್ರಿಯೆ ಅವರ ತವರಿನಲ್ಲಿ ಇಂದು ನೆರವೇರಿದ ಕಾರಣ ಮತದಾನವನ್ನು ಮುಂದೂಡಲಾಗಿದೆ.
ಎಲಿವಾಳ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿದ ಬೆಟದೂರಿನಲ್ಲಿ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿದ್ದು, ಫೆಬ್ರವರಿ 15ರಂದು ಮತದಾನ ನಡೆಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.