ದೇಹದಾನಕ್ಕೆ ನಿರ್ಧರಿಸಿದ ಒಂದೇ ಕುಟುಂಬದ 24 ಸದಸ್ಯರು
ಬಳ್ಳಾರಿಯ ಹಗರಿ ಬೊಮ್ಮನಹಳ್ಳಿಯಲ್ಲಿ ಒಂದೇ ಕುಟುಂಬದ 24 ಜನರು ಮರಣಾನಂತರ ದೇಹದಾನ ಮಾಡಲು ನಿರ್ಧರಿಸಿದ್ದಾರೆ.

ಬಳ್ಳಾರಿ: ಬಳ್ಳಾರಿಯ ಹಗರಿ ಬೊಮ್ಮನಹಳ್ಳಿಯಲ್ಲಿ ಒಂದೇ ಕುಟುಂಬದ 24 ಜನರು ಮರಣಾನಂತರ ದೇಹದಾನ ಮಾಡಲು ನಿರ್ಧರಿಸಿದ್ದಾರೆ.
ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬದ ಸದಸ್ಯರು ನಿರ್ಧರಿಸಿದ್ದು, ಮರಣಾನಂತರ ದೇಹ ಮಣ್ಣಾಗುವುದು ಅಥವಾ ಬೂದಿಯಾಗುವುದರ ಬದಲು ವೈದ್ಯಕೀಯ ಕ್ಷೇತ್ರಕ್ಕೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ನಿರ್ಧಾರ ಕೈಗೊಂಡಿದ್ದಾರೆ.
ಕುಟುಂಬದ ಮುಖ್ಯಸ್ಥರಾಗಿದ್ದ ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ರಾವ್ ದೇಹದಾನ ನಿರ್ಧಾರ ಕೈಗೊಂಡಿದ್ದರು. ಅವರ ನಿಧನಾನಂತರ ದೇಹವನ್ನು ವಿಮ್ಸ್ ಗೆ ದಾನ ಮಾಡಲಾಯಿತು. ಕೃಷ್ಣಮೂರ್ತಿ ರಾವ್ ಅವರ ನಿರ್ಧಾರವೇ ಕುಟುಂಬದ ಉಳಿದ ಸದಸ್ಯರಿಗೂ ಪ್ರೇರಣೆಯಾಗಿದ್ದು, ಪತ್ನಿ, ಮಕ್ಕಳು, ಅಳಿಯಂದಿರು ಹಾಗೂ ಸಹೋದರನ ಕುಟುಂಬದವರು ಸೇರಿ ಒಟ್ಟು 24 ಸದಸ್ಯರು ತಾವೂ ದೇಹದಾನ ಮಾಡಲು ನಿರ್ಧರಿಸಿ ರಾಜ್ಯದಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


