ಜಿಲ್ಲಾ ಸುದ್ದಿ

ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ

ಮಹದಾಯಿ ವಿವಾದಕ್ಕೆ ಸಂಬಂಧಿಸಿ ಕೇಂದ್ರದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಮತ್ತೆ ಸರ್ವ ಪಕ್ಷ ಸಭೆ ಕರೆಯಲು ನಿರ್ಧರಿಸಿದೆ...

ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಮಹದಾಯಿ ವಿವಾದಕ್ಕೆ ಸಂಬಂಧಿಸಿ ಕೇಂದ್ರದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಮತ್ತೆ ಸರ್ವ ಪಕ್ಷ ಸಭೆ ಕರೆಯಲು ನಿರ್ಧರಿಸಿದೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ವಿವಾದಕ್ಕೆ ಸಂಬಂಧಿಸಿ ಸರ್ಕಾರ ಮತ್ತೆ ಎಲ್ಲಾ ಪಕ್ಷಗಳ ಸಲಹೆ ಪಡೆಯಲಿದೆ ಎಂದರು. ಈಗಾಗಲೇ ಪ್ರಧಾನಿ ಮೋದಿ ಅವರ ಬಳಿ ನಿಯೋಗ ಕರೆದೊಯ್ದು ಕೇಂದ್ರ ಮಧ್ಯ ಪ್ರವೇಶಿಸಬೇಕೆಂದು ವಿನಂತಿಸಲಾಗಿತ್ತು. 3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೂ ಒತ್ತಾಯಿಸಲಾಗಿತ್ತು.

ಒಂದು ತಿಂಗಳಾದರೂ ಕೇಂದ್ರ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ನಾವು ಇನ್ನೂ ಭರವಸೆಯಿಂದಲೇ ಕೇಂದ್ರದ ಕಡೆ ನೋಡುತ್ತಿದ್ದೇವೆ. ಕೆಲವು ದಿನಗಳವರೆಗೂ ಇದೇ ರೀತಿ ನಿರೀಕ್ಷಿಸಿ ನಂತರ ಸರ್ವ ಪಕ್ಷಗಳ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಹಾಗೆಯೇ ಗೋವಾದಲ್ಲಿ ಅಲ್ಲಿನ ಸರ್ಕಾರ ಕನ್ನಡಿಗರನ್ನು ಬೀದಿ ಪಾಲು ಮಾಡಿರುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಹೀಗೆಲ್ಲಾ ಮಾಡಬಾರದು. ಸಂತ್ರಸ್ತರಿಗೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕು. ಗಂಜಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು. ಮಹದಾಯಿ ಮತ್ತು ಗೋವಾ ಕನ್ನಡಿಗರ ವಿಚಾರವಾಗಿ ಸದ್ಯದಲ್ಲೇ ಗೋವಾ ಸಿಎಂ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ರಾಜಕೀಯ ಬೇಡ: ಮಹದಾಯಿ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಇದನ್ನು ಯಾವುದೇ ಪಕ್ಷ ಮಾಡಬಾರದು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಐಸಿಸಿ ನಾಯಕಿ ಸೋನಿಯಾಗಾಂಧಿ ಅವರ ಬಳಿ ನಿಯೋಗ ಕರೆದೊಯ್ಯುವ ಮಾತನಾಡುತ್ತಿದ್ದಾರೆ. ಇವರಿಗೆ ನಿಜಕ್ಕೂ ಜನರ ಸಮಸ್ಯೆ ಬಗೆಹರಿಸುವ ಆಸಕ್ತಿ ಇದ್ದರೆ, ನಿಯೋಗವನ್ನು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕಿರುವ ಪ್ರಧಾನಿ ಮೋದಿ ಬಳಿ ಕರೆದೊಯ್ಯಬೇಕು ಎಂದರು.

ನೀರು ತಂದೇ ತೀರುವೆವು: ರೈತರ ಶಪಥ
ಮಲಪ್ರಭಾ ನದಿಗೆ ಮಹದಾಯಿ ನದಿ ಜೋಡಿಸುವಂತೆ ರೈತ ಸೇನೆ ರಾಜ್ಯ ಘಟಕ ಕೂಡಲಸಂಗಮದಿಂದ ಕಣಕುಂಬಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಸೋಮವಾರ ಮಧ್ಯಾಹ್ನ ನಗರ ಪ್ರವೇಶಿಸಿತು.

ಸ್ಥಳೀಯ ರೈತರು ಪಾದಯಾತ್ರೆಯನ್ನು ಅದೂಟಛಿರಿಯಾಗಿ ಬರಮಾಡಿಕೊಂಡರು. ಬಳಿಕ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದ ಸಭೆಯಲ್ಲಿ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಮಹದಾಯಿ ನೀರಿಗಾಗಿ ಕಳೆದ 75 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಆದರೂ, ಸರಕಾರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ.ಮಹದಾಯಿ ನೀರಿಗಾಗಿ ನಮ್ಮ ಪ್ರಾಣ ಕೊಡಲು ಸಿದ್ಧ. ನೀರು ತರುವುದೇ ನಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.