ಸಾಹಿತಿಗಳನ್ನು ಬೆದರಿಸುವುದೂ ಭಯೋತ್ಪಾದನೆಯೇ: ಕುಂ.ವೀ
ಸಾಹಿತಿಗಳಿಗೆ ಬೆದರಕೆ ಒಡ್ಡುವುದೂ ಒಂದು ರೀತಿಯ ಭಯೋತ್ಪಾದನೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ...

ಧಾರವಾಡ: ಸಾಹಿತಿಗಳಿಗೆ ಬೆದರಕೆ ಒಡ್ಡುವುದೂ ಒಂದು ರೀತಿಯ ಭಯೋತ್ಪಾದನೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ಸೋಮವಾರ ಸಂಜೆ ಇಲ್ಲಿನ ಡಾ. ಎಂ. ಎಂ. ಕಲಬುರ್ಗಿ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಹಿಂಸೆಯನ್ನು ಪ್ರಚೋದಿಸುವ ಒಂದು ವರ್ಗ ಸಮಾಜದಲ್ಲಿ ಬೆಳೆಯುತ್ತಿದ್ದು, ಆದಷ್ಟು ಬೇಗ ಆ ವರ್ಗವನ್ನು ಹೊಡೆದೋಡಿಸಬೇಕು. ಇಲ್ಲದಿದ್ದರೆ ಇನ್ನಷ್ಟು ಅನಾಹುತಗಳಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
``ಭಗವದ್ಗೀತೆಯಲ್ಲಿನ ಕೆಲ ಅಮಾನವೀಯ ಅಂಶಗಳನ್ನು ನಾನೂ ವಿರೋಧಿಸಿದ್ದೇನೆ. ಆದರೆ, ಭಗವದ್ಗೀತೆ ಸುಡಬೇಕೆಂದು ಹೇಳಿದೆ ಪ್ರೊ. ಕೆ.ಎಸ್. ಭಗವಾನ್ ಅವರ ಹೇಳಿಕೆಯನ್ನು ನಾನು ಒಪ್ಪೋದಿಲ್ಲ'' ಎಂದು ಪ್ರತಿಪಾದಿಸಿದ ಕುಂ.ವೀ, ``ಈ ಹೇಳಿಕೆಯಿಂದಾಗಿ ಅವರಿಗೆ ಬೆದರಿಕೆ ಬರುತ್ತಿದ್ದು, ಸಾಹಿತಿಗಳಿಗೆ ಎಷ್ಟೇ ರಕ್ಷಣೆ ನೀಡಿದರೂ ಅವರು ಕ್ಷೇಮವಾಗಿರಲು ಸಾಧ್ಯವಿಲ್ಲ'' ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಬುಡಕಟ್ಟ ವಿವಿ ಕುಲಪತಿ ಡಾ. ತೇಜಸ್ವಿ ಕಟ್ಟೀಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


