ಪಾನ್ಸರೆ ಪ್ರಕರಣ ಮರೆತೇ ಬಿಟ್ಟಿದ್ದ ಮಹಾ ಪೊಲೀಸರು
ವಿಚಾರವಾದಿ ಗೋವಿಂದ ಪಾನ್ಸರೆ ಕೊಲೆ ಪ್ರಕರಣವನ್ನು ಮರೆತೇ ಬಿಟ್ಟಿದ್ದ ಮಹಾರಾಷ್ಟ್ರ ಪೊಲೀಸರು, ಡಾ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ...

Published On :
ಮುಂಬೈ: ವಿಚಾರವಾದಿ ಗೋವಿಂದ ಪಾನ್ಸರೆ ಕೊಲೆ ಪ್ರಕರಣವನ್ನು ಮರೆತೇ ಬಿಟ್ಟಿದ್ದ ಮಹಾರಾಷ್ಟ್ರ ಪೊಲೀಸರು, ಡಾ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ತನಿಖೆಯ ಮುನ್ನಡೆಯಿಂದ ಎಚ್ಚೆತ್ತು ಆರೋ ಪಿಯನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಇಂಥ ಟೀಕೆ ವ್ಯಕ್ತವಾಗಿದ್ದು, ಕರ್ನಾಟಕ ಪೊಲೀಸರ ತನಿಖೆ ಮುನ್ನಡೆ ಬಳಿಕವಷ್ಟೆ ಮಹಾರಾಷ್ಟ್ರ ಪೊಲೀಸರು ಪಾನ್ಸರೆ ಕೊಲೆ ಆರೋಪಿ ಗಾಯಕವಾಡ ನನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಸನಾತನ ಸಂಸ್ಥೆ ವಿರುದ್ಧ ತನಿಖೆಯ ದಿಕ್ಕುತಪ್ಪಿಸಲು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ. ಸಿಪಿಐ ನಾಯಕ, ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಕಳೆದ ವಾರ ಸನಾತನ ಸಂಸ್ಥೆ ಸದಸ್ಯ ಸಮೀರ್ ಗಾಯಕವಾಡ್‍ನನ್ನು ಬಂಧಿಸಿದ್ದಾರೆ. ಡಾ.ಕಲಬುರ್ಗಿ ಹತ್ಯೆ ಸಂಬಂಧ ಕರ್ನಾಟಕ ಪೊಲೀಸರು ಸನಾತನ ಸಂಸ್ಥೆಯ ಕೈವಾಡ ಶಂಕಿಸಿ ಕೊಲ್ಹಾಪುರ ಹಾಗೂ ಸಾಂಗ್ಲಿಯಲ್ಲಿ ತನಿಖೆ ಕೈಗೊಂಡಿದ್ದರು. ಈ ತನಿಖೆ ವೇಳೆ ದೊರೆತ ಮಹತ್ವದ ಸುಳಿವಿನ ಬಳಿಕವಷ್ಟೇ ಮಹಾ ಪೊಲೀಸರು ಪಾನ್ಸರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


