ಕುಡು ಒಕ್ಕಲಿಗರಿಗೆ ಮೀಸಲಾತಿ: ಎಚ್ಕೆ
ಲಿಂಗಾಯಿತರ ಒಂದು ಪಂಗಡವಾದ ಕುಡು ಒಕ್ಕಲಿಗರಿಗೆ ವಿಶೇಷ ಮೀಸಲಾತಿ ಕಲ್ಪಿಸುವ ಸಂಬಂಧ ಸಚಿವ ಎಂ.ಬಿ. ಪಾಟೀಲ್ ಜತೆಗೂಡಿ ಪ್ರಯತ್ನಿಸುವುದಾಗಿ ...

Published On :
ಬೆಂಗಳೂರು: ಲಿಂಗಾಯಿತರ ಒಂದು ಪಂಗಡವಾದ ಕುಡು ಒಕ್ಕಲಿಗರಿಗೆ ವಿಶೇಷ ಮೀಸಲಾತಿ ಕಲ್ಪಿಸುವ ಸಂಬಂಧ ಸಚಿವ ಎಂ.ಬಿ. ಪಾಟೀಲ್ ಜತೆಗೂಡಿ ಪ್ರಯತ್ನಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಭರವಸೆ ನೀಡಿದರು. ಅಖಿಲ ಕರ್ನಾಟಕ ಕುಡು ಒಕ್ಕಲಿಗರ ಸಂಘವು ರಾಜಾಜಿನಗರದಲ್ಲಿರುವ ಡಾ.ರಾಜಕುಮಾರ್ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ, ಗ್ರಾಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ನೇಮಿಸಿರುವ ಆಯೋಗಕ್ಕೆ ಕುಡು ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸಲು ಈ ಸಂಘ ಮನವಿ ಸಲ್ಲಿಸಿದೆ. ರಾಜ್ಯ ಸರ್ಕಾರದಿಂದ ಬೇಕಾದ ಸಹಕಾರವನ್ನು ನಾವು ಕೊಡಿಸುತ್ತೇವೆ ಎಂದರು.
ವಿಶಿಷ್ಟ ಜನಾಂಗ: `ನಮ್ಮ ಉತ್ತರ ಕರ್ನಾಟಕದಲ್ಲಿ ಒಕ್ಕಲುತನ ಮಾಡದ ಮಂದಿ ಯನ್ನು ನೋಡಿ ಅವರ ಕುಟುಂಬದವರು, ಸುಮ್ಮನೆ ಯಾಕೆ ಆರಾಮ ಕಟ್ಟೇಲಿ ಕುಳಿತಿದ್ದೀರಾ. ಕುಡುಒಕ್ಕಲಿಗರನ್ನು ನೋಡಿ ಕಲಿರಿ ಎಂದು ಹೇಳುವುದರಲ್ಲೇ ಗೊತ್ತಾಗುತ್ತದೆ. ಕುಡು ಒಕ್ಕಲಿಗರ ಒಕ್ಕುಲತನದ ವಿಶೇಷತೆ. ಒಂದು ಕಾಲದಲ್ಲಿ ಜಮೀನ್ದಾರರಾಗಿದ್ದ ಕುಡುಒಕ್ಕಲಿಗರಲ್ಲಿ, ಕೆಲವರು ಭೂಮಿ ಮಾರಿಕೊಂಡಿದ್ದಾರೆ. ಕೆಲವರು ವಿದೇಶದಲ್ಲಿ ನೆಲೆಸಿದ್ದಾರೆ. ಇನ್ನೂ ಕೆಲವರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ . ಇವರೆಲ್ಲರೂ ತಮ್ಮ ಊರಿನತ್ತ ಮುಖ ಮಾಡಲು ಹೊಸದಾಗಿ ಗೆದ್ದಿರುವ ಗ್ರಾಪಂ
ಸದಸ್ಯರು ಪ್ರಯತ್ನಿಸಬೇಕು ಎಂದರು. ಸಿದ್ಧಾರೂಢ ಮಠದ ಡಾ.ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಡು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಕುಮಾಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


