ಜಿಲ್ಲಾ ಸುದ್ದಿ

ಎತ್ತಿನಹೊಳೆ ತಡೆಗೆ ರಕ್ತ ಹರಿಸಿಯೇವು

ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿ ಭಾಗದಲ್ಲಿ ಹೋರಾಟ ತೀವ್ರಗೊಂಡಿದ್ದು, ರಕ್ತ ಹರಿಸಿಯಾದರೂ ಯೋಜನೆ ನಿಲ್ಲಿಸುತ್ತೇವೆ ಎಂದು...

ಎತ್ತಿನಹೊಳೆ ತಡೆಗೆ ರಕ್ತ ಹರಿಸಿಯೇವು
ಎತ್ತಿನಹೊಳೆ ಯೋಜನೆ ವಿರೋಧಿಸಿ ಉಪ್ಪಿನಂಗಡಿಯಲ್ಲಿನ ನಡೆದ ಪ್ರತಿಭಟನೆ (ಕೃಪೆ: ಕೆಪಿಎನ್ )
Published On :

ಉಪ್ಪಿನಂಗಡಿ: ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿ ಭಾಗದಲ್ಲಿ ಹೋರಾಟ ತೀವ್ರಗೊಂಡಿದ್ದು, ರಕ್ತ ಹರಿಸಿಯಾದರೂ ಯೋಜನೆ ನಿಲ್ಲಿಸುತ್ತೇವೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಜಿಲ್ಲೆಯ ಪ್ರಮುಖ ಯತಿಗಳು, ಸರ್ವಧರ್ಮಗಳ ಧಾರ್ಮಿಕ ಮುಖಂ-ಡರು, ಗಣ್ಯರು, ಚಲನಚಿತ್ರ ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಹೆದ್ದಾರಿ ತಡೆ ಚಳವಳಿ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಮೂರೂವರೆ ತಾಸು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ನೇತ್ರಾವತಿ ನದಿ ಸಹಿತ ಯಾವುದೇ ನದಿ ಇಡೀ ದೇಶದ ಆಸ್ತಿ. ಅದರ ನೀರು ಬಳಸಲು ಎಲ್ಲರಿಗೂ ಅಧಿಕಾರವಿದೆ. ಆದರೆ ಪ್ರಕೃತಿದತ್ತ ನದಿಯ ಮೂಲವನ್ನು ಕತ್ತರಿಸಿ ನದಿಯನ್ನು ಬತ್ತಿಸಿ ನದಿ ಪಾತ್ರದ ಪ್ರದೇಶವನ್ನು ಬರಡು ಭೂಮಿಯನ್ನಾಗಿಸುವ ಅಧಿಕಾರ ಯಾರಿಗೂಇಲ್ಲ. ನದಿ ಸಮುದ್ರ ಸೇರುವ ಮುನ್ನ ನದಿಯ ನೀರನ್ನು ಇಡೀ ರಾಜ್ಯಕ್ಕೆ ಬಳಸುವ  ಯೋಜನೆ ರೂಪಿಸಿ. ಆದರೆ ನದಿಯ ಅಸ್ತಿತ್ವಕ್ಕೆ ಸಂಚ ಕಾರ ತರುವಂತಹ ನದಿಯ ನೀರು ಅಲ್ಲಿಗೂ ಇಲ್ಲದೆ ಇಲ್ಲಿಗೂ ದೊರೆಯದಂತೆ ಮಾಡುವಯೋಜನೆಯನ್ನು ರಕ್ತ ಹರಿಸಿಯಾದರೂ ತಡೆಗಟ್ಟಲು ಜಿಲ್ಲೆಯ ಜನತೆ ಒಗ್ಗೂಡಿರುವುದನ್ನು ಸರ್ಕಾರ ಮನಗಾಣಬೇಕೆಂದು ಎಚ್ಚರಿಸಿದರು. ಹೋರಾಟಗಾರರ ಜತೆ ಎಲ್ಲ ಗಣ್ಯರು, ಸಂಸದರು, ಯತಿಗಳು ಕೂಡಾ ಹೆದ್ದಾರಿ ಯಲ್ಲೇ ಕುಳಿತು ಪ್ರತಿಭಟನೆಯಲ್ಲಿ ಕೊನೆವರೆಗೆ ಭಾಗವಹಿಸಿದ್ದರು. ಉಪ್ಪಿನಂಗಡಿಯ ಜನತೆ ತಮ್ಮತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಹೋರಾಟ ದಲ್ಲಿ ಭಾಗವಹಿಸಿದರು. ಮೂಲತಃ ಹುಬ್ಬಳ್ಳಿಯವರಾ ದ ಪ್ರಸಕ್ತ ಉಪ್ಪಿನಂಗಡಿಯಲ್ಲಿ ವಾಸ್ತವ್ಯ ವಿರುವ ಮಂದಿ, ರಾಜಸ್ಥಾನ ಮೂಲದ ರಜಪೂತ ವ್ಯಾಪಾರಿಗಳೂ ಭಾಗಿಗಳಾಗಿ ಗಮನ ಸೆಳೆದರು. ಮಳೆಯನ್ನೂ ಲೆಕ್ಕಿಸದೇ ಜನ ಪ್ರತಿಭಟನೆ ನಡೆಸಿದರು. ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದವು.

ಜನಪರ ಯೋಜನೆಗಳ ಅನುಷ್ಠಾನದಲ್ಲಿ ನಾಯಕರೆನಿಸಿಕೊಂಡವರು ಬೆಂಬಲ ನೀಡಬೇಕು ಇಲ್ಲವೆ ಮೌನವಾಗಿರಬೇಕು, ಈಗ ವಿರೋಧ ವ್ಯಕ್ತವಾಗುತ್ತಿರುವುದು ಕೇವಲ ಸ್ವಾರ್ಥ ರಾಜಕೀಯದಿಂದ ಮಾತ್ರ, ವೈಯಕ್ತಿಕ ರಾಜಕೀಯಕ್ಕೆ ಇಂತಹ ಯೋಜನೆಗಳನ್ನು ಬಳಸಿಕೊಳ್ಳುತ್ತಿರುವುದು ರಾಜಕೀಯ ದುರುದ್ದೇಶದಿಂದ.
-ವೀರಪ್ಪ ಮೊಯ್ಲಿ ,ಚಿಕ್ಕಬಳ್ಳಾಪುರ ಸಂಸದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.