ಕಲ್ಬುರ್ಗಿ ಹಂತಕರ ಸುಳಿವು ನೀಡಿದರೆ 5 ಲಕ್ಷ ಬಹುಮಾನ
ಹಿರಿಯ ಸಂಶೋಧಕ ಹಾಗೂ ಖ್ಯಾತ ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆಗೆ ಸಂಬಂಧಿಸಿದಂತೆ ಹಂತಕರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ....

ಬೆಂಗಳೂರು: ಹಿರಿಯ ಸಂಶೋಧಕ ಹಾಗೂ ಖ್ಯಾತ ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆಗೆ ಸಂಬಂಧಿಸಿದಂತೆ ಹಂತಕರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾ ದರ್ಶನ ವೇಳೆ, ತಮ್ಮನ್ನು ಭೇಟಿ ಮಾಡಿದ ಸ್ವಾಮೀಜಿಗಳು ಹಾಗೂ ಕವಿಗಳ ಸಮೂಹಕ್ಕೆ ಸಿಎಂ ಸಿದ್ದರಾಮಯ್ಯ ಈ ಭರವಸೆ ನೀಡಿದರು. ಕಲ್ಬುರ್ಗಿ ಅವರ ಹತ್ಯೆಯಾಗಿ 15 ದಿನಗಳಾದರೂ ಇದುವರೆಗೂ ಹಂತಕರ ಪತ್ತೆಯಾಗದ ಹಿನ್ನೆಲೆಯಲ್ಲಿ, ಇಂದು ಪ್ರಗತಿ ಪರ ಚಿಂತಕರು ಹಾಗೂ ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಂಶೋಧಕ ಡಾ. ಕಲ್ಬುರ್ಗಿ ಅವರ ಹತ್ಯೆ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ಇನಾಮು ಕೊಡುವುದಾಗಿ ತಿಳಿಸಿದ ಅವರು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುವುದಾಗಿ ಹೇಳಿದರು.ಪ್ರಕರಣ ಸಂಬಂಧ ಸಿಐಡಿ ಹಾಗೂ ಪೊಲೀಸರ ತನಿಖೆ ಮುಂದುವರಿದಿದ್ದು ಇದುವರೆಗೂ ಯಾವುದೇ ಗಮನಾರ್ಹ ಮಾಹಿತಿ ತಿಳಿದು ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


