ಜಿಲ್ಲಾ ಸುದ್ದಿ

ನೇತ್ರಾವತಿಗಾಗಿ ಜೈಲ್‍ಭರೋ

ರಾಜ್ಯದಲ್ಲಿ ಮತ್ತೊಂದು ನದಿ ಹೋರಾಟ ಪ್ರಾರಂಭವಾಗುತ್ತಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮಂಗಳವಾರ ಹೆದ್ದಾರಿ ತಡೆ ಹಾಗೂ ಜೈಲ್...

ನೇತ್ರಾವತಿಗಾಗಿ ಜೈಲ್‍ಭರೋ
ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ
Published On :

ಉಪ್ಪಿನಂಗಡಿ: ರಾಜ್ಯದಲ್ಲಿ ಮತ್ತೊಂದು ನದಿ ಹೋರಾಟ ಪ್ರಾರಂಭವಾಗುತ್ತಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮಂಗಳವಾರ ಹೆದ್ದಾರಿ ತಡೆ ಹಾಗೂ ಜೈಲ್ ಭರೋ ಚಳವಳಿಗೆ ದಕ್ಷಿಣ ಕನ್ನಡ ಜನ ಸಿದ್ಧಗೊಂಡಿದ್ದಾರೆ. ಜಿಲ್ಲಾದ್ಯಂತ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಮುಂಜಾ ಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಆದರೆ, ಸಂಚಾರ ಅಸ್ತವ್ಯಸ್ತ ವಾಗುವ ಎಲ್ಲ ಸಾಧ್ಯತೆ ಇದ್ದು, ಪರ್ಯಾಯ ವ್ಯವಸ್ಥೆಗೂ ಚಿಂತಿಸಲಾಗಿದೆ. ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಳ್ಳಲಿವೆ. ಜಿಲ್ಲಾದ್ಯಂತ ಭಾರಿ ಸಂಖ್ಯೆಯಲ್ಲಿ ಜನತೆ ಆಗಮಿಸುವ ಸಾಧ್ಯತೆ ಇದ್ದು, ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ದ.ಕ. ಜಿಲ್ಲೆಯ ತುಳು ಚಿತ್ರರಂಗ ಈಗಾಗಲೇ ನದಿ ತಿರುವು ಯೋಜನೆಯನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಅಲ್ಲದೆ, ಕಲಾವಿದರ ತಂಡ ಹೋರಾಟದಲ್ಲಿ ಭಾಗವಹಿಸಲಿದೆ ಎಂದು ಯುವ ನಟ ಅರ್ಜುನ್ ಕಾಪಿಕಾಡ್ ಹಾಗೂ ನಿರ್ಮಾಪಕ ಸಚಿನ್ ಎಸ್. ಗೌಡ ತಿಳಿಸಿದ್ದಾರೆ.
ಬಿಗಿ ಭದ್ರತೆ: ಪ್ರತಿಭಟನೆ ಕಾವನ್ನು ಅರಿತಿರುವ ರಾಜ್ಯ ಸರ್ಕಾರ ಪೊಲೀಸ್ ಬಿಗಿ ಬಂದೋಬಸ್ತ್ ಗೆ  ವ್ಯವಸ್ಥೆ ಮಾಡಿದೆ. ರಾಜ್ಯಾದ್ಯಂತ ಪೊಲೀಸ್ ತಂಡವನ್ನು ಕರೆಸಿಕೊಂಡಿದ್ದು, ಉಪ್ಪಿನಂಗಡಿಯಸುತ್ತಮುತ್ತ 1200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ.


ಬದಲಿ ಮಾರ್ಗ
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲಿವೆ.
ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಸಿಲುಕ ಬಾರದು ಎಂಬ ಉದ್ದೇಶದಿಂದ ಈ ಕ್ರಮ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.