ಜಿಲ್ಲಾ ಸುದ್ದಿ

ಹೆತ್ತ ಮಗಳಿಗೆ ವಿಷವುಣಿಸಿದ ಪೋಷಕರು!

ಹೆತ್ತವರೇ ಮಗಳಿಗೆ ವಿಷವುಣಿಸಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ರಾಮನಗರದ ಕೆ.ಜಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಹೆತ್ತ ಮಗಳಿಗೆ ವಿಷವುಣಿಸಿದ ಪೋಷಕರು!
ಮರ್ಯಾದಾ ಹತ್ಯೆ(ಸಾಂಕೇತಿಕ ಚಿತ್ರ)
Published On :

ಬೆಂಗಳೂರು: ಹೆತ್ತವರೇ ಮಗಳಿಗೆ ವಿಷವುಣಿಸಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ರಾಮನಗರದ ಕೆ.ಜಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಹತ್ಯೆ ಮಾಡಿದ ಹೆತ್ತವರನ್ನು ಪೊಲೀಸರು ಬಂಧಿಸಿದ್ದಾರೆ. ರಂಜಿತಾ(15 ) ಹತ್ಯೆಯಾದ ಬಾಲಕಿ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದ ಹಿನ್ನೆಲೆಯಲ್ಲಿ ಪೋಷಕರು ಮರ್ಯಾದಾ ಹತ್ಯೆ ನಡೆಸಿದ್ದಾರೆ. ಮೃತರ ತಂದೆ ಗೋವಿಂದರಾಜು, ತಾಯಿ ಜಯಲಕ್ಷ್ಮಿ ಬಂಧಿತರು. ಮಗಳನ್ನು ತಾವೇ ಹತ್ಯೆ ಮಾಡಿರುವುದಾಗಿ ವಿಚಾರಣೆ ವೇಳೆ ಪೋಷಕರು ಒಪ್ಪಿಕೊಂಡಿದ್ದಾರೆ.

ಗೋವಿಂದರಾಜು ಹೇರ್ ಸೆಲೂನ್ ಅಂಗಡಿ ಇಟ್ಟುಕೊಂಡಿದ್ದರು. ಜಯಲಕ್ಷ್ಮಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದರು. ಬೆಂಗಳೂರಿನ ಸುಂಕದಕಟ್ಟೆಯ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ರಂಜಿತಾ 7 ನೇ ತರಗತಿ ಫೇಲ್ ಆದ ಕಾರಣ ಶಾಲೆ ಬಿಡಿಸಲಾಗಿತ್ತು. ಅವರ ಮನೆ ಸಮೀಪವೇ ವಾಸವಿದ್ದ ಹುಬ್ಬಳ್ಳಿ ಮೂಲದ ಮಂಜುನಾಥ ಎಂಬುವವನ  ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ತಂಗಿ 15 ನೇ ವರ್ಷದಲ್ಲಿಯೇ ಪ್ರೀತಿಯ ಸುಳಿಗೆ ಬಿದ್ದ ವಿಷಯ ತಿಳಿದು ಗಾಬರಿಗೊಂಡ ಅಕ್ಕ, ರಂಜಿತಾಳನ್ನು ತಂದೆಯೊಂದಿಗೆ ಸ್ವಗ್ರಾಮಕ್ಕೆ ಕಳಿಸಿಕೊಟ್ಟಿದ್ದರು.     

ಮೊಬೈಲ್ ನಲ್ಲಿ ನಿರಂತರ ಸಂಪರ್ಕ ಇರಿಸಿಕೊಂಡಿದ್ದ ರಂಜಿತ ಸೆ.6 ರಂದು ಪ್ರೇಮಿ ಜತೆ ಓಡಿಹೋಗಿದ್ದಳು. ಪೋಷಕರು ಮಗಳು ಅನ್ಯ ಜಾತಿಗೆ ಸೇರಿದ ಹುಡುಗನನ್ನು ಪ್ರೀತಿಸಿ ಓಡಿ ಹೋಗಿದ್ದರಿಂದ ಮರ್ಯಾದೆ ಹೋಯಿತು ಎಂದು ಅಕ್ರೋಶಗೊಂಡು ವಿಷವುಣಿಸಿ ಕೊಲೆ ಮಾಡಿದ್ದಾರೆ. ಅಪ್ರಾಪ್ತೆಯನ್ನು ಅಪಹರಣ ಮಾಡಿದ್ದಕ್ಕಾಗಿ ಮಂಜುನಾಥನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.