ಜಿಲ್ಲಾ ಸುದ್ದಿ

ವಿದ್ಯುತ್ ಕೊಡದಿದ್ರೆ ಕಾಂಗ್ರೆಸ್ಸನ್ನೂ ನೀರಲ್ಲಿ ಮುಳುಗಿಸ್ತಾರೆ: ಈಶ್ವರಪ್ಪ

ಗೌರಿ ಗಣೇಶೋತ್ಸವಕ್ಕೆ ಸರ್ಕಾರ ವಿದ್ಯುತ್ ನೀಡದೇ ಇದ್ದಲ್ಲಿ ಗೌರಿ ಗಣೇಶ ಮೂರ್ತಿಗಳಂತೆ ಜನರು ಕಾಂಗ್ರೆಸ್ ಸರ್ಕಾರವನ್ನೂ...

ವಿದ್ಯುತ್ ಕೊಡದಿದ್ರೆ ಕಾಂಗ್ರೆಸ್ಸನ್ನೂ ನೀರಲ್ಲಿ ಮುಳುಗಿಸ್ತಾರೆ: ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
Published On :

ಮಡಿಕೇರಿ: ಗೌರಿ ಗಣೇಶೋತ್ಸವಕ್ಕೆ ಸರ್ಕಾರ ವಿದ್ಯುತ್ ನೀಡದೇ ಇದ್ದಲ್ಲಿ ಗೌರಿ ಗಣೇಶ ಮೂರ್ತಿಗಳಂತೆ ಜನರು ಕಾಂಗ್ರೆಸ್ ಸರ್ಕಾರವನ್ನೂ ನೀರಿನಲ್ಲಿ ಮುಳುಗಿಸುವುದು ಖಂಡಿತ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಕುಶಾಲನಗರದಲ್ಲಿ ರೈತ ಚೈತನ್ಯ ಯಾತ್ರೆಯಲ್ಲಿ ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳು ಉತ್ಪಾದಿಸುತ್ತಿರುವ ವಿದ್ಯುತ್ತನ್ನು ಹೊರರಾಜ್ಯಗಳಿಗೆ ಮಾರಾಟ ಮಾಡುವ ಬದಲಿಗೆ ರಾಜ್ಯದಲ್ಲಿಯೇ ವಿನಿಯೋಗಿಸಿದರೆ ವಿದ್ಯುತ್ ಸಮಸ್ಯೆ ತಡೆಗಟ್ಟಬಹುದು ಎಂದೂ ಸಲಹೆ ನೀಡಿದರು. ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರವಾಗುತ್ತಿದ್ದರೂ ಗೃಹ ಸಚಿವಾಲಯ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ. ನಾಡಿನ ಮಹಿಳೆಯರು, ಮಕ್ಕಳಿಗಾದ ದುರ್ಗತಿ ಗೃಹ ಸಚಿವರ ಮೊಮ್ಮಗಳ ಮೇಲಾಗಿದ್ದರೆ ಸಚಿವ ಜಾರ್ಜ್ ಸುಮ್ಮನಿರುತ್ತಿದ್ದರೆ' ಎಂದು ಪ್ರಶ್ನಿಸಿದರು

ರಾಜ್ಯದಲ್ಲಿ ರೈತ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೇ ವಿನಾ ಯಾವುದೇ ಮಂತ್ರಿ, ಶಾಸಕ, ಅಧಿಕಾರಿ ಸಾವಿಗೆ ಶರಣಾಗುತ್ತಿಲ್ಲ. ವಿಜಯ್ ಮಲ್ಯ ರೂ. 22 ಸಾವಿರ ಕೋಟಿ ಸಾಲ ಮಾಡಿದ್ದರೂ ಅವರಿಗೇನೂ ಆಗಿಲ್ಲ. ಹೀಗಿರುವಾಗ ರೈತರು ಮಾನ ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗುತ್ತಿದ್ದಾರೆ.
ಪ್ರಹ್ಲಾದ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.