ವಿದ್ಯುತ್ ಬೇಡಿಕೆಗೆ ಕೇಂದ್ರದ ನಿರಾಸಕ್ತಿ: ಡಿಕೆಶಿ ಅಸಮಾಧಾನ
ಸುಮಾರು 1500 ಮೆಗಾವ್ಯಾಟ್ ವಿದ್ಯುತ್ ಗಾಗಿ ರಾಜ್ಯ ಬೇಡಿಕೆಯಿಟ್ಟರೂ ಕೇಂದ್ರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಸಮಾಧಾನ...

ಹುಬ್ಬಳ್ಳಿ: ಸುಮಾರು 1500 ಮೆಗಾವ್ಯಾಟ್ ವಿದ್ಯುತ್ ಗಾಗಿ ರಾಜ್ಯ ಬೇಡಿಕೆಯಿಟ್ಟರೂ ಕೇಂದ್ರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ನವನಗರದ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾತ್ರಿ ವೇಳೆ 200 ಮೆ.ವ್ಯಾ. ವಿದ್ಯುತ್ ಪಡೆಯಲು ತಿಳಿಸಿತ್ತು. ಆದರೆ ಸಾಧ್ಯವಾಗಲಿಲ್ಲ.
ಹೊರ ರಾಜ್ಯಗಳಿಂದ 900 ಮೆ.ವ್ಯಾ.ವಿದ್ಯುತ್ ಖರೀದಿಗೆ ನಿರ್ಧರಿಸಿ ಟೆಂಡರ್ ಕರೆಯಲಾಗಿದೆ. ರಾತ್ರಿ ಹೊತ್ತು ವಿದ್ಯುತ್ ಕಡಿತ ಮಾಡದಿರಲು ಪ್ರಯತ್ನ ಸಾಗಿದೆ. ಮೂರು ತಿಂಗಳಲ್ಲಿ ರಾಜ್ಯದ ಕೆಲವೆಡೆ ವಿದ್ಯುತ್ ಕೊರತೆ ಸಾಕಷ್ಟು ನೀಗಲಿದೆ ಎಂದರು.
ಬರಗಾಲದಿಂದ ನೀರಾವರಿ ಯೋಜನೆ ಕಾಮಗಾರಿ ವಿಳಂಬವಾಗಲಿದೆ. ಆದರೂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರೂ. 5 ಲಕ್ಷ ದವರೆಗಿನ ಯೋಜನಾ ಕಾಮಗಾರಿಯನ್ನು ವಿದ್ಯುತ್ ಮಂಡಳಿಯೇ ನಿರ್ವಹಿಸಲಿದೆ. ಕಾಮಗಾರಿ ಮುಗಿದ ಬಳಿಕ ಯೋಜನಾ ವೆಚ್ಚವನ್ನು ಸಂಬಂಧಪಟ್ಟ ಪಂಚಾಯಿತಿಗಳಿಂದ ಪಡೆಯಲಾಗುವುದು ಎಂದರು.
ಗಣೇಶ ಹಬ್ಬದಂದು ಸಾರ್ವಜನಿಕ ಪೆಂಡಾಲ್‍ಗಳಲ್ಲಿ ವಿದ್ಯುತ್ ಬಳಸುವವರು ಕಡ್ಡಾಯವಾಗಿ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಲೈನ್‍ಗಳಿಗೆ ಕೊಕ್ಕೆ ಹಾಕಿ ವಿದ್ಯುತ್ ಕದಿಯುವುದು ಸರಿಯಲ್ಲ. ಬರದ ಸಮಯದಲ್ಲಿ ವಿದ್ಯುತ್ ಕಳ್ಳತನ ಬೇಡ.
ಡಿ.ಕೆ.ಶಿವಕುಮಾರ್ ಇಂಧನ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


