ಎಫ್ ಟಿಐಐ ಅಧ್ಯಕ್ಷರ ನೇಮಕ ಅಡೂರು, ಕಾಸರವಳ್ಳಿ ಬೇಸರ
ಫಿಲ್ಮ್ ಆ್ಯಂಡ್ ಟೆಲಿವಿಸನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿಐಐ) ಅಧ್ಯಕ್ಷರ ನೇಮಕದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಖ್ಯಾತ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್ ಮತ್ತು ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ...

ಬೆಂಗಳೂರು: ಫಿಲ್ಮ್ ಆ್ಯಂಡ್ ಟೆಲಿವಿಸನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿಐಐ) ಅಧ್ಯಕ್ಷರ ನೇಮಕದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಖ್ಯಾತ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್ ಮತ್ತು ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಅಧ್ಯಕ್ಷರಾಗಿ ನೇಮಕಗೊಂಡವರು ಯಾರೆಂಬುದೇ ಗೊತ್ತಿಲ್ಲ, ಗುಂಪಿನಲ್ಲಿ ಅವರೊಬ್ಬರಷ್ಟೇ. ಇಡೀ ಚಿತ್ರರಂಗದಲ್ಲಿ ಒಂದಷ್ಟು ಬದಲಾವಣೆಗೆ ಕಾರಣವಾಗಿರುವ ಈ ಸಂಸ್ಥೆಗೆ ಕಲೆ, ಸಾಹಿತ್ಯ, ಚಿತ್ರರಂಗ, ರಂಗಭೂಮಿ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿರುವವರನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರಕ್ಕೂ ತಾನು ಮಾಡಿರುವ ನೇಮಕ ತಪ್ಪಾಗಿದೆ ಎಂದು ಅರಿವಾಗಿದೆ. ತೀವ್ರ ಹೋರಾಟ ನಡೆದಿದ್ದರೂ ತನ್ನ ತಪ್ಪನ್ನು ಅದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಚಲನಚಿತ್ರ ರಂಗದ ಭವಿಷ್ಯದ ವ್ಯಕ್ತಿಗಳೇ ಬೀದಿಗಿಳಿದು ಹೋರಾಟ ನಡೆಸಿದರೂ ಸ್ಪಂದನೆ ದೊರೆಯದೇ ಇರುವುದು ಬೇಸರದ ಸಂಗತಿ ಎಂದ ಅವರು, ಬಾಲಿವುಡ್ ಸಹ ಈ ಆಯ್ಕೆಯನ್ನು ಟೀಕಿಸಿದೆ ಎಂದರು. ಡಬ್ಬಿಂಗ್ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಈ ಇಬ್ಬರು ನಿರ್ದೇಶಕರು, ಭಾರತದೊಳಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ಬಿಂಗ್ ನಡೆದಾಗ ಅಳಿವಿನಂಚಿನಲ್ಲಿ ಭಾಷೆಯ ಚಿತ್ರೋದ್ಯಮಕ್ಕೆ ಹೆಚ್ಚು ಪೆಟ್ಟು ಬೀಳಬಹುದು. ಹಣ, ಅಬ್ಬರ ದಿಂದಾಗಿ ಡಬ್ಬಿಂಗ್ ಚಿತ್ರಗಳು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತವೆ ಎಂದರು.
ಸುದ್ದಿಗೋಷ್ಠಿಗೆ ಮುನ್ನ ಅಂತಾರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅಡೂರು ಗೋಪಾಲಕೃಷ್ಣನ್, ಚಲನಚಿತ್ರವು
ದಿನಪತ್ರಿಕೆಯಂತಲ್ಲ. ಚಲನಚಿತ್ರ ರೂಪಿಸುವವರು ಜನರನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕಾಗುತ್ತದೆ. ಪ್ರೇಕ್ಷಕರು ಹಣ ಕೊಟ್ಟು ಸಮಯ ನೀಡುತ್ತಾರೆ. ಅವರಿಗೆ ಬೇಸರ ಬಾರದಂತೆ ಸದಾಭಿಪ್ರಾಯದ ಚಿತ್ರವನ್ನು ನೀಡುವುದು ನಿರ್ದೇಶಕನ ಹೊಣೆಯಾಗಿರುತ್ತದೆ ಎಂದರು. ಗಿರೀಶ್ ಕಾಸರವಳ್ಳಿ, ವಿಶ್ರಾಂತ ಕುಲಪತಿ ಮಾಧವ ಮೆನನ್, ನಿವೃತ್ತಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


