ಕೆಎಸ್ ಆರ್ ಟಿಸಿ ತರಬೇತಿ ನೌಕರರಿಗೆ ಭತ್ಯೆ ಹೆಚ್ಚಳ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ, ...

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ, ನಿಗಮದಲ್ಲಿ ಕೆಲಸ ಮಾಡುವ ತರಬೇತಿ ನೌಕರರ ಮಾಸಿಕ ಸಂಬಳ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ. ಈ ಆದೇಶ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಇದೇ ಮೊದಲ ಬಾರಿಗೆ ಶೇ. 30 ರಷ್ಟು ಭತ್ಯೆ ಹೆಚ್ಚಳ ಮಾಡಲಾಗಿದ್ದು ರಾಜ್ಯದ ನಾಲ್ಕೂ ನಿಗಮಗಳ 17 ಸಾವಿರ ಸಿಬ್ಬಂದಿಗೆ ಈ ಸೌಲಭ್ಯ ದೊರಕಲಿದೆ. ಇದರಿಂದ ನಿಗಮಕ್ಕೆ ವಾರ್ಷಿಕ ರೂ. 60 ಕೋಟಿ ಹೆಚ್ಚುವರಿ ಹೊರೆಯಾಗಲಿದೆ.
ಯಾರಿಗೆ ಎಷ್ಟು ಹೆಚ್ಚಳ
ಸಂಚಾರ ನೀರಿಕ್ಷಕ, ಪಾರುಪತ್ತೆಗಾರ, ಸಿಬ್ಬಂದಿ, ಮೇಲ್ವಿಚಾರಕ, ಅಂಕಿ ಅಂಶ ಪರೀಕ್ಷಕ. ಉಗ್ರಾಣ ರಕ್ಷಕ, ಕಿರಿಯ ಅಭಿಯಂತರ, ವಿಭಾಗೀಯ ಭದ್ರತಾ ನಿರೀಕ್ಷಕರಿಗೆ ಸದ್ಯರೂ. 7 800ರಿಂದ 10.150.
ಸಹಾಯಕ ಉಗ್ರಾಣ ರಕ್ಷಕ ಸಹಾಯಕ ಲೆಕ್ಕಿಗ, ಕಿರಿಯ ಶೀಘ್ರ ಲಿಪಿಕಾರ, ಸ್ಟಾಫ್ ನರ್ಸ್ ಮತ್ತು ತತ್ಸಮಾನ ಹುದ್ದೆ ಸಿಬ್ಬಂದಿಗೆ ರೂ. 7.500 ರಿಂದ 9. 750
ಚಾಲಕರಿಗೆ ರೂ. 7.500ರಿಂದ 10 ಸಾವಿರಕ್ಕೆ, ನಿರ್ವಾಹಕ, ಚಾಲಕ ಕಮ್ ನಿರ್ವಾಹಕರಿಗೆ ರೂ. 7 ಸಾವಿರದಿಂದ ರೂ. 9.100
ದಿನ ನಿತ್ಯ ಬಳಕೆ ವಸ್ತುಗಳ ದರ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ತರಬೇತಿ ನೌಕಕರರಿಗೆ ಸಂಬಳ ಕಡಿಮೆ ಇದ್ದು ಜೀವನ ಸಾಗಿಸುವುದು ಕಷ್ಟ. ಇದನ್ನು ಅರಿತ ನಿಗಮ ಇದೇ ಮೊದಲ ಬಾರಿಗೆ ಶೇ. 30 ರಷ್ಟು ಸಂಬಳ ಹೆಚ್ಚಿಸಿದೆ.
ರಾಜೇಂದ್ರ ಕುಮಾರ್ ಕಠಾರಿಯಾ
ಎಂ.ಡಿ. ಕೆಎಸ್ ಆರ್ ಟಿಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


