ಮಂಗಳೂರಲ್ಲಿ ಮತ್ತೆ ನೈತಿಕ ಪೊಲೀಸ್‍ಗಿರಿ!
ನೈತಿಕ ಪೊಲೀಸ್‍ಗಿರಿ ಮಾಡುವವರನ್ನು ಗಡಿಪಾರು ಮಾಡುತ್ತೇವೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಮಂಗಳೂರಲ್ಲಿ ಹೇಳಿದ ಮರುದಿನವೇ ನಗರದ ಸಿಟಿ ಸೆಂಟರ್...

ಮಂಗಳೂರು :ನೈತಿಕ ಪೊಲೀಸ್‍ಗಿರಿ ಮಾಡುವವರನ್ನು ಗಡಿಪಾರು ಮಾಡುತ್ತೇವೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಮಂಗಳೂರಲ್ಲಿ ಹೇಳಿದ ಮರುದಿನವೇ ನಗರದ ಸಿಟಿ ಸೆಂಟರ್ ಮುಂಭಾಗದಲ್ಲಿ ಯುವಕ, ಯುವತಿ ಮಾತನಾಡುತ್ತಿದ್ದ ವೇಳೆ ನೈತಿಕ ಪೊಲೀಸ್‍ಗಿರಿ ನಡೆದಿದೆ.
ಮುಸ್ಲಿಂ ಯುವತಿ ಜತೆ ಹಿಂದೂ ಯುವಕ ಇದ್ದಾನೆ ಎಂಬ ಕಾರಣಕ್ಕೆ ಆ ಭಾಗದ ಮುಸ್ಲಿಂ ಯುವಕರು ಒಟ್ಟು ಸೇರಿ ವಿಚಾರಣೆ ನಡೆಸಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಂ ಯುವತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಿಟಿ ಸೆಂಟರ್‍ಗೆ ಮಂಗಳವಾರ ಬಂದಿದ್ದರು. ಹಿಂದೂ ಯುವಕ, ಯುವತಿ ಮತ್ತು ಮುಸ್ಲಿಂ ಯುವತಿ ಇದ್ದರು.
ಇದನ್ನೇ ಗಮನಿಸಿದ ಕೆಲ ಪುಂಡರು ಭಿನ್ನ ಕೋಮಿನ ಜೋಡಿ ಎಂದು ಗೊತ್ತಾದ ತಕ್ಷಣ ಹಲ್ಲೆ ನಡೆಸಿದ್ದಾರೆ.
ಬಂದರು ಪೊಲೀಸರಿಗೆ ಈ ಮಾಹಿತಿ ಲಭಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸ್ ವಾಹನದಲ್ಲಿ ಸಂತ್ರಸ್ತರನ್ನು ಕರೆದುಕೊಂಡು ಹೋಗಿದ್ದಾರೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ನೈತಿಕ ಪೊಲೀಸ್‍ಗಿರಿ ನಡೆದರೆ ಆ ವ್ಯಾಪ್ತಿಯ ಠಾಣಾಧಿಕಾರಿಯನ್ನೇ ಹೊಣೆ ಮಾಡಲಾ ಗುವುದು ಎಂದು ಗೃಹ ಸಚಿವರು ಹೇಳಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಯುವತಿಯರು ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ.
ದೂರು ಕೊಟ್ಟರೆ ಸ್ವೀಕರಿಸುತ್ತೇವೆ
ನಗರದ ಸಿಟಿ ಸೆಂಟರ್ ಬಳಿ ಹಿಂದೂ ಯುವಕನ ಜತೆ ಮುಸ್ಲಿಂ ಯುವತಿ ಇದ್ದ ಕಾರಣಕ್ಕೆ ಕೆಲವು ಮುಸ್ಲಿಂ ಯುವಕರು ಅವರನ್ನು ಅಡ್ಡಗಟ್ಟಿದರು. ಗಲಾಟೆ ಆಗುವ ಮೊದಲೇ ಬಂದರು ಪೊಲೀಸರು ಸ್ಥಳಕ್ಕೆ ತೆರಳಿದರು. ಆಗ ಅಲ್ಲಿದ್ದ ಯುವಕರು ತಪ್ಪಿಸಿಕೊಂಡರು. ಈ ಸಂಬಂಧ ಸಂತ್ರಸ್ತರು ದೂರು ಕೊಟ್ಟರೆ ಕೇಸ್ ದಾಖಲಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


