ಆತ್ಮರಕ್ಷಣೆಗೆ ರೌಡಿ ಶೀಟರ್ ಎನ್ ಕೌಂಟರ್
ನಿನ್ನೆ ಕಲಬುರಗಿ ಜಿಲ್ಲೆ ಅಫ್ಜುಲ್ ಪುರ ಬಳಿ ನಡೆದಿರುವಂತಹ ರೌಡಿ ಶೀಟರ್ ಎನ್ ಕೌಂಟರ್ ಆತ್ಮರಕ್ಷಣೆಗೆ ಮಾಡಿದ್ದು...

Published On :
ಕಲಬುರಗಿ: ನಿನ್ನೆ ಕಲಬುರಗಿ ಜಿಲ್ಲೆ ಅಫ್ಜುಲ್ ಪುರ ಬಳಿ ನಡೆದಿರುವಂತಹ ರೌಡಿ ಶೀಟರ್ ಎನ್ ಕೌಂಟರ್ ಆತ್ಮರಕ್ಷಣೆಗೆ ಮಾಡಿದ್ದು ಎಂದು ಈಶಾನ್ಯ ವಲಯ ಐಜಿಪಿ ಸುನಿಲ್ ಅಗರ್ವಾಲ್ ಸ್ಪಷ್ಟನೇ ನೀಡಿದ್ದಾರೆ.
ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ರೌಡಿ ಶೀಟರ್ ಪ್ರಕಾಶ್ ಭೂತಿ ಎಂಬುವವನ್ನು ಅಫ್ಜಲ್ ಪುರ ಹೊರವಲಯದಲ್ಲಿ ಎನ್ ಕೌಂಟರ್ ಮಾಡಲಾಗಿತ್ತು.
ಪಿಎಸ್ ಐ ಸುರೇಶ್ ಮತ್ತು ಇಬ್ಬರು ಪೇದೆಗಳೊಂದಿಗೆ ಗಸ್ತಿನಲ್ಲಿದ್ದಾಗ ಅಫ್ಜಲ್ ಪುರ ಹೊರವಲಯದ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದನಂತೆ, ದರೋಡೆ, ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆತನನ್ನು ಹಿಡಿಯಲು ಪೊಲೀಸರು ಮುಂದಾದಾಗ ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಐಜಿಪಿ ತಿಳಿಸಿದ್ದಾರೆ.
ಅಫ್ಜಲ್ ಪುರ ಪೊಲೀಸ್ ಠಾಣೆಯ ಪಿಎಸ್ ಐ ಸುರೇಶ್ ಅವರ ಗುಂಡಿಗೆ ಪ್ರಕಾಶ್ ಭೂತಿ ಬಲಿಯಾಗಿದ್ದಾನೆ. ರೇವಣ್ಣ ಸಿದ್ದೇಶ್ವರ ಕಾಲೋನಿ ನಿವಾಸಿಯಾಗಿದ್ದ ಪ್ರಕಾಶ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದನು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


