ಜಿಲ್ಲಾ ಸುದ್ದಿ

ಮಂಡ್ಯ ಜಿಲ್ಲೆಯಲ್ಲಿ ಆರು ರೈತರ ಆತ್ಮಹತ್ಯೆ

ಸಾಲಬಾಧೆಯಿಂದ ಜಿಲ್ಲೆಯ ಹಲವೆಡೆ ಎರಡು ದಿನಗಳ ಅವಧಿಯಲ್ಲಿ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...

ಮಂಡ್ಯ ಜಿಲ್ಲೆಯಲ್ಲಿ ಆರು ರೈತರ ಆತ್ಮಹತ್ಯೆ
(ಸಾಂದರ್ಭಿಕ ಚಿತ್ರ)
Published On :

ಮಂಡ್ಯ: ಸಾಲಬಾಧೆಯಿಂದ ಜಿಲ್ಲೆಯ ಹಲವೆಡೆ ಎರಡು ದಿನಗಳ ಅವಧಿಯಲ್ಲಿ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ತಾಲೂಕು ಗೋಪಾಲಪುರ ಗ್ರಾಮದ ನಾಗೇಂದ್ರ (32), ಮದ್ದೂರು ತಾಲೂಕು ಮಾಲಗಾರನ ಹಳ್ಳಿಯ ಚನ್ನೇಗೌಡ (40), ತಗ್ಗ ಹಳ್ಳಿಯ ಚಿಕ್ಕೋನು (44), ಅಣೆಗೌಡನದೊಡ್ಡಿ ಗ್ರಾಮದ ಅಪ್ಪಾಜಿ ಹಾಗೂ ಕೆ.ಆರ್ .ಪೇಟೆ ತಾಲೂಕು ರಂಗನ ತಿಟ್ಟು ಗ್ರಾಮದ ಸಿದ್ದರಾಮೇಗೌಡ (55), ಹೊಳಲು ಗ್ರಾಮದಲ್ಲಿ ಆನಂದ (38) ಆತ್ಮಹತ್ಯೆ ಮಾಡಿಕೊಂಡವರು. ಮಂಡ್ಯದ ಗೋಪಾಲಪುರ ಗ್ರಾಮದ ನಾಗೇಂದ್ರ ಸುಮಾರು ರು.ಲಕ್ಷ ಕೈಸಾಲ ಪಡೆದಿದ್ದು ಕಬ್ಬಿನ ಬೆಳೆ ನಷ್ಟವಾದ್ದರಿಂದ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಮದ್ದೂರು ಅಣೆದೊಡ್ಡಿ ಗ್ರಾಮದ ಅಪ್ಪಾಜಿ ರು.2.50 ಲಕ್ಷ ಸಾಲ ಪಡೆದಿದ್ದರು. ಕೊಪ್ಪ ಹೋಬಳಿ ತಗ್ಗಹಳ್ಳಿ ಗ್ರಾಮದ ಚಿಕ್ಕೋನು ರು.4 ಲಕ್ಷ ಸಾಲ, ಮಾಲಗಾರನಹಳ್ಳಿ ಗ್ರಾಮದ
ಚನ್ನೇಗೌಡ ರು.1.75 ಲಕ್ಷ ಸಾಲ, ಕೆ. ಆರ್. ಪೇಟೆ ತಾಲೂಕಿನ ರಂಗನತಿಟ್ಟುಗ್ರಾಮದ ಸಿದ್ದರಾಮೇಗೌಡ ರು.3 ಲಕ್ಷದವರೆಗೆ ಸಾಲ, ಹೊಳಲು ಗ್ರಾಮದ ಆನಂದ (38) ತಮ್ಮ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.