ನಿಮ್ಹಾನ್ಸ್ ಪ್ರಭಾರಿಗೆ ಪ್ರತಿಭಟನೆ ಶಾಕ್
ಹಳೆ ಆರೋಪಗಳು, ವಿವಾದಿತ ನಿರ್ಧಾರಗಳು ಮತ್ತು ನೌಕರರ ಬೇಡಿಕೆಗಳು ಒಮ್ಮೆಲೆ ಸ್ಪೋಟಗೊಂಡು ಇಡೀ ನಿಮ್ಹಾನ್ಸ್ ಬುಧವಾರ...ಗೊಂದಲಗಳ ಗೂಡಾಯಿತು.

ಬೆಂಗಳೂರು : ಹಳೆ ಆರೋಪಗಳು, ವಿವಾದಿತ ನಿರ್ಧಾರಗಳು ಮತ್ತು ನೌಕರರ ಬೇಡಿಕೆಗಳು ಒಮ್ಮೆಲೆ ಸ್ಪೋಟಗೊಂಡು ಇಡೀ ನಿಮ್ಹಾನ್ಸ್ ಬುಧವಾರ ಗೊಂದಲಗಳ ಗೂಡಾಯಿತು. ನೌಕರರ ಸಂಘದ ಪ್ರತಿಭಟನೆ ನಿಮ್ಹಾನ್ಸ್ ಪ್ರಭಾರಿ ನಿರ್ದೇಶಕರಿಗೆ ಡಾ.ಸತೀಶ್‍ಚಂದ್ರ ಅವರಿಗೆ ತಲೆನೋವಾಗಿ ಕಾಡಲಾರಂಭಿಸಿತು.
ಹಲವು ಆರೋಪ, ಬೇಡಿಕೆಗಳ ಹಿನ್ನೆಲೆ ಯಲ್ಲಿ ಪ್ರತಿಭಟನಾನಿರತ ನೌಕರರು ನಿರ್ದೇಶಕರ ವಿರುದ್ಧ ಆರೋಪಗಳ ಸುರಿಮಳೆಗೈದರು. ಅಲ್ಲದೆ, ಅವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದರು.ಬೇಡಿಕೆಗಳನ್ನು ಈಡೇರಿಸದಿದ್ದರೆ ನಿರ್ದೇಶಕ
ವಿರುದ್ಧ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ನಿರ್ದೇಶಕ ಸತೀಶ್ ಚಂದ್ರ ಅವರು ಪ್ರತಿಭಟನಾಕರರ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.
ಗಲಾಟೆಗೇನು ಕಾರಣ?
ನಿಮ್ಹಾನ್ಸ್ ಒಳಗಣ ಸಮಸ್ಯೆಗಳು ಒಂದೆರಡಲ್ಲ.ಸಂಸ್ಥೆಗೆ ಕಾಯಂ ನಿರ್ದೇಶಕರಿಂದ ಹಲವು
ತಿಂಗಳಿಂದ ಸಂಸ್ಥೆಯಲ್ಲಿ ಪ್ರಭಾರ ನಿರ್ದೇಶಕರದ್ದೇ ಕಾರುಬಾರು. ನಿವೃತ್ತ ನೌಕರರನ್ನೇ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಪ್ರಭಾರಿ ನಿರ್ದೇಶಕ ಡಾ.ಸತೀಶ್‍ಚಂದ್ರ ನಿಲುವನ್ನು ನಂತರ ಪ್ರಭಾರಿಯಾಗಿ ಬಂದ ಡಾ. ಪ್ರಧಾನ್ ವಿರೋಧಿಸಿದ್ದರು. ಅಷ್ಟೇ ಅಲ್ಲ. ಆ ನೌಕರರಲ್ಲಿ ಕೆಲವರನ್ನು ವಜಾಗೊಳಿಸಿದರು. ಆದರೆ, ಡಾ. ಸತೀಶ್‍ಚಂದ್ರ ಅವರು ಪುನಃ ಪ್ರಭಾರಿ ನಿರ್ದೇಶಕರಾಗಿ ಬಂದು ಕೆಲವರನ್ನು ಮರು ನೇಮಕ ಮಾಡಿದರು. ಈ ನಿರ್ಧಾರ ಹಲವರ ಕಣ್ಣು ಕೆಂಪಾಗಿಸಿದೆ.
ಸತೀಶ್ ಚಂದ್ರ ಈ ಮೊದಲು 200 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಇದಕ್ಕೆ ನೌಕರರ ಸಂಘ ವಿರೋಧಿಸಿತ್ತು, ಸತೀಶ್ ಚಂದ್ರ ಅವರು ಎರಡನೇ ಬಾರಿಗೆ ಪ್ರಭಾರಿ ನಿರ್ದೇಶಕರಾಗಿ ಬಂದ ನಂತರ
ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಭಾರಿ ನಿರ್ದೇಶಕ ಡಾ. ಸತೀಶ್ ಚಂದ್ರ ಅವರು ಡಾ.ಜಯರಾಂ ನೇತೃತ್ವದಲ್ಲಿ ಐವರು ಸದಸ್ಯರಿರುವ ಸತ್ಯ ಶೋಧನಾ ಸಮಿತಿ ರಚಿಸಿದ್ದರು.ಸಮಿತಿ ರಚನೆ ವಿರೋಧಿಸಿ ಬುಧವಾರ ಪ್ರತಿಭಟನೆಯನ್ನೂ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಭಾರಿ ನಿರ್ದೇಶಕ ಡಾ. ಸತೀಶ್‍ಚಂದ್ರ ಅವರು ಸಮಿತಿ ನೀಡಿದ್ದ ವರದಿಯನ್ನೇ ಹರಿದು ಬಿಸಾಡಿ ಮೌನಕ್ಕೆ ಶರಣಾದರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪಕ್ಕೆ ಮರುಜೀವ: ಈ ಎಲ್ಲಾ ರಗಳೆಗಳ ನಡುವೆ, ಫಿಸಿಯೋಥೆರಪಿಸ್ಟ್ ಡಾ.ಪ್ರಜ್ಞಾ ಅವರಿಗೆ ಡಿಎನ್‍ಆರ್ ವಿಭಾಗದ ಮುಖ್ಯಸ್ಥ ಡಾ. ಅನುಪಮ್ ಗುಪ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಕ್ಕೆ ಮರು ಜೀವ ಬಂದಿದೆ. ಈ ಪ್ರಕರಣ ನಡೆದಾಗ ಡಾ. ಸತೀಶ್‍ಚಂದ್ರ ಅವರು ನಿರ್ದೇಶಕರಾಗಿರಲಿಲ್ಲ. ಆದರೂ ಪ್ರಕರಣದಲ್ಲಿ ಆರೋಪಿ ಡಾ. ಅನುಪಮ್ ಗುಪ್ತಾ ಯಾವುದೇ ತಪ್ಪು ಮಾಡಿಲ್ಲ ಎಂದು ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದೋಷವಿದ್ದು ಸತೀಶ್‍ಚಂದ್ರ ಅನ್ಯಾಯ ಎಸಗಿದ್ದಾರೆ ಎಂದು ನಿಮ್ಹಾನ್ಸ್ ಪರಿಶಿಷ್ಜಚಾತಿ, ವರ್ಗಗಳ ನೌಕರರ ಸಂಘದ ಪದಾಧಿಕಾರಿಗಳು ದೂರಿದ್ದಾರೆ.
ನೌಕಕರಿಗೆ ತೊಂದರೆಯಾಗುವಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲರಿಗೂ ನ್ಯಾಯಮಾರ್ಗದಲ್ಲೇ ಸೌಲಭ್ಯ ಒದಗಿಸಿದ್ದೇವೆ. ನೌಕರರ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿವೆ. ಲೈಂಗಿಕ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಆ ಪ್ರಕರಣ ಸಂದರ್ಭದಲ್ಲಿ ನಾನು ನಿರ್ದೇಶಕನಾಗಿರಲಿಲ್ಲ.
●ಡಾ. ಸತೀಶ್‍ಚಂದ್ರ ನಿಮ್ಹಾನ್ಸ್ ಪ್ರಭಾರಿ ನಿರ್ದೇಶಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


