ಸಂಕುಚಿತ ಮನೋಭಾವದವರನ್ನು ಹೊಂದಿದ ದೇಶ ನಮ್ಮದು: ಬರಗೂರು ರಾಮಚಂದ್ರಪ್ಪ
ಧರ್ಮ, ಜನಾಂಗಗಳ ಹೆಸರಿನಲ್ಲಿ ನಮ್ಮ ದೇಶದಲ್ಲಿ ಅನ್ಯಾಯ ನಡೆಯುತ್ತದೆ.ಸ್ವತಂತ್ರ ಜೀವನವನ್ನು ನಡೆಸಲು...

ಬೆಂಗಳೂರು: ಧರ್ಮ, ಜನಾಂಗಗಳ ಹೆಸರಿನಲ್ಲಿ ನಮ್ಮ ದೇಶದಲ್ಲಿ ಅನ್ಯಾಯ ನಡೆಯುತ್ತದೆ.ಸ್ವತಂತ್ರ ಜೀವನವನ್ನು ನಡೆಸಲು ಬಿಡುವುದಿಲ್ಲ. ಅನೇಕ ವಿಷಯಗಳಿಗೆ ಅಡ್ಡಪಡಿಸಲಾಗುತ್ತದೆ. ಪಾರ್ಸಿ ಜನಾಂಗದ ವ್ಯಕ್ತಿಯನ್ನು ಮದುವೆಯಾಗಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಇಂದಿರಾಗಾಂಧಿಯನ್ನು ಒಡಿಶಾದಲ್ಲಿ ದೇಗುಲ ಪ್ರವೇಶಿಸಲು ಬಿಟ್ಟಿರಲಿಲ್ಲ. ಶ್ರೀಕೃಷ್ಣನ ಹಾಡನ್ನು ಹಾಡುವ ಖ್ಯಾತ ಗಾಯಕ ಜೇಸುದಾಸ್ ಅವರನ್ನು ಗುರುವಾಯೂರು ದೇವಾಲಯದ ಒಳಗೆ ಬಿಡಲಿಲ್ಲ. ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ಧವಿದೆ. ಇವೆಲ್ಲ ನಮ್ಮ ದೇಶದ ಜನರ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹಿರಿಯ ಬಂಡಾಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ, ಕನಕದಾಸರು, ಅಂಬೇಡ್ಕರ್ ಮೊದಲಾದವರನ್ನು ನಾವು ಜಾತಿಗೆ ಸೀಮಿತ ಮಾಡಬಾರದು. ಸಾಮಾಜಿಕ ನಾಯಕರ ಜಯಂತಿಗಳು ಇಂದು ಜಾತಿಗಳ ಜಯಂತಿಗಳಾಗುತ್ತಿವೆ. ಇದರಿಂದ ಸಮಾಜದ ಜನರ ಮನಸ್ಸಿನಲ್ಲಿ ಬಿರುಕು ಮೂಡಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.
ನಾನು ದೇವರನ್ನು ನಂಬುವುದಿಲ್ಲ. ದೇವರಿದ್ದರೆ ಆತ ಬಡವರ ಗುಡಿಸಲಿಗೂ ಬಂದು ಅವರ ಕಷ್ಟಗಳನ್ನು ವಿಚಾರಿಸಬೇಕಾಗುತ್ತಿತ್ತು. ನಮ್ಮ ರಾಜಕೀಯ ನಾಯಕರು ಇನ್ನೂ ಜಾತಿಯ ಬಗ್ಗೆ ತಿಳಿದುಕೊಂಡಿಲ್ಲ. ನಮ್ಮ ಜಾತಿಯೇ ಶ್ರೇಷ್ಠ ಎಂದು ನಾಯಕರು ಹೇಳಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಜಾತ್ಯತೀತತೆಗಿಂತ, ಜಾತಿಯೇ ಮುಖ್ಯವಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


