ಜಿಲ್ಲಾ ಸುದ್ದಿ

ಭಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

ತಲಕಾವೇರಿಯಲ್ಲಿ ಪ್ರತೀ ವರ್ಷದಂತೆ ಈ ಭಾರಿಯೂ ನಿಗದಿಯಂತೆ ಕಾವೇರಿಯ ಪವಿತ್ರ ತೀಥೋದ್ಭವವಾಗಿದೆ...

ಭಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ
ತೀಥೋದ್ಭವ
Published On :
ತಲಕಾವೇರಿ: ತಲಕಾವೇರಿಯಲ್ಲಿ ಪ್ರತೀ ವರ್ಷದಂತೆ ಈ ಭಾರಿಯೂ ನಿಗದಿಯಂತೆ ಕಾವೇರಿಯ ಪವಿತ್ರ ತೀಥೋದ್ಭವವಾಗಿದೆ. 
ಇಂದು ಮುಂಜಾನೆ ಮಿಥುನ ಲಗ್ನದಲ್ಲಿ 12 ಗಂಟೆ 16 ನಿಮಿಷಕ್ಕೆ ಕುಂಡಿಕೆಯಿಂದ ಉಕ್ಕಿ ಬಂದು ತೀರ್ಥೋದ್ಭವ ಕಂಡು ಭಕ್ತರು ಪುನೀತರಾಗಿ ಕಾವೇರಮ್ಮನ ಪಾದಾರವಿಂದಗಳಿಗೆ ಗೋವಿಂದ ಎಂದು ಘೋಷಣೆ ಕೂಗಿದರು.
ಕಾವೇರಿ ತೀಥೋಧ್ಬವ ಆಗುವ ಅರ್ಧಗಂಟೆ ಮುನ್ನ ಕೋಡಿ ಕುಟುಂಬದ ಸದಸ್ಯರು ದೇವರ ಬಂಡಾರವನ್ನು ದೇವಾಲಯಕ್ಕೆ ತರುತ್ತಿದ್ದಂತೆ, ಕುಂಡಿಕೆ ಸುತ್ತಲು ಪ್ರಧಾನ ಅರ್ಚಕರು ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ ಮೂಲಕ ಪೂಜಾ ವಿವಿಧಿವಿಧಾನ ನೆರವೇರಿಸಿದರು.
ಇನ್ನು ಜೀವನದಿ ಕಾವೇರಿಯ ಪವಿತ್ರ ನೀರನ್ನು ಪಡೆಯಲು ನೂರಾರು ಭಕ್ತರು ಮುಗಿಬಿದ್ದರು. ಕೊರೆಯುವ ಚಳಿ ಮಂಜು ಮುಸುಕಿದ ವಾತಾವರಣದಲ್ಲೂ ತಾಯಿಯ ದರ್ಶನ ಪಡೆದು ಭಕ್ತರು ಪುನೀತರಾದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.