ಜಿಲ್ಲಾ ಸುದ್ದಿ

ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಪ್ರಕರಣ ರದ್ದು

ಸಾಲುಮರದ ತಿಮ್ಮಕ್ಕನ ಹೆಸರು ಬಳಸಿಕೊಂಡು ಅಕ್ರಮವಾಗಿ ಹಣ ದೇಣಿಗೆ ಸಂಗ್ರಹಿಸಿದ ಆರೋಪದಲ್ಲಿ ಅನಿವಾಸಿ ಭಾರತೀಯ ಪ್ರಜೆಯಾಗಿರುವ ರಿತೂ ಪ್ರಿಮಿಲಾನಿ...

ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಪ್ರಕರಣ ರದ್ದು
ಹೈಕೋರ್ಟ್
Published On :
 ಬೆಂಗಳೂರು: ಸಾಲುಮರದ ತಿಮ್ಮಕ್ಕನ ಹೆಸರು ಬಳಸಿಕೊಂಡು ಅಕ್ರಮವಾಗಿ ಹಣ ದೇಣಿಗೆ ಸಂಗ್ರಹಿಸಿದ ಆರೋಪದಲ್ಲಿ ಅನಿವಾಸಿ ಭಾರತೀಯ ಪ್ರಜೆಯಾಗಿರುವ ರಿತೂ ಪ್ರಿಮಿಲಾನಿ ಎಂಬುವರವಿರುದ್ಧ ರಾಮನಗರ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಜೆಎಂಎಫ್ ಸಿ ನ್ಯಾಯಾಲಯ ಯದಲ್ಲಿ ನಡೆಯುತ್ತಿದ್ದ ವಿಚಾರಣೆ ಯನ್ನೂ ರದ್ದುಗೊಳಿಸಿ ಆದೇಶಿಸಿದೆ.ರಿತೂ ಪ್ರಿಮಿಲಾನಿ ತನ್ನ ವಿರುದ್ಧ ರಾಮನಗರದ ಐಜೂರು ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಹಾಜರಾಗಿದ್ದ ರಿತೂ ಪ್ರಿಮಿಲಾನಿ ಪರ ವಕೀಲರು, ತಿಮ್ಮಕ್ಕನ ಹೆಸರು ಬಳಸಿಕೊಂಡಿದೆ ಎಂಬ ಆರೋಪ ಹೊತ್ತಿರುವ ಎನ್‍ಜಿಒ ಅನ್ನು 2013ರಲ್ಲಿ ಸ್ಥಗಿತಗೊಳಿಸಲಾಗಿದೆ. ಆ ಸಂಸ್ಥೆಯಲ್ಲಿ ನಾನು ಸದಸ್ಯೆಯಾಗಿದ್ದೇನೆಯೇ ವಿನಃ ಎಲ್ಲ ವ್ಯವಹಾರಗಳಲ್ಲಿ ತಾನೂ ಭಾಗಿಯಾಗಿಲ್ಲ. ವಿನಾಕಾರಣ ತಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು,ರದ್ದುಗೊಳಿಸಬೇಕು ಎಂದು ಮನವಿ  ಮಾಡಿದರು.
ಪ್ರಕರಣ: ಸಾಲು ಮರದ ತಿಮ್ಮಕ್ಕ  ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ದೆಹಲಿ ಮೂಲದ ಪರಿಸರ ಶಿಕ್ಷಣ ಟ್ರಸ್ಟ್ ಎಂಬ ಸರ್ಕಾರೇತರ ಸಂಸ್ಥೆಯೊಂದು
ಅಮೆರಿಕದಲ್ಲಿ ಕೋಟ್ಯಂತರ ರು. ದೇಣಿಗೆ ಸಂಗ್ರಹಿಸಿತ್ತು. ಈ ವಿಷಯವನ್ನು ಅಂತರ್ಜಾಲದ ಮೂಲಕ ಮಾಹಿತಿ ಪಡೆದ ತಿಮ್ಮಕ್ಕ ಅವರು 2014 ಮೇ 20ರಂದು ರಾಮನಗರದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರಿತು ಪ್ರಿಮ್ ಲಾನಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪೊಲೀಸರು, 2014 ರ ಜುಲೈ 19ರಂದು ಆಕೆಯನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ರಾಮನಗರ ಅಧೀನ ನ್ಯಾಯಾಲಯ ಆಕೆಯನ್ನು ಒಂದು ವಾರದ ಕಾಲ ಪೊಲೀಸ್ ವಶಕ್ಕೆ ಆದೇಶಿಸಿತ್ತು. ನಂತರ, ಅವರು ಜಾಮೀನಿನ ಮೇಲೆ ಹೊರಬಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.