ಗಗನಕ್ಕೇರಿದ ತೊಗರಿಬೇಳೆ: ಕೆಜಿಗೆ ರೂ.200
ದಿನ ನಿತ್ಯದ ಅಡುಗೆಗೆ ಅತ್ಯಗತ್ಯವಾಗಿ ಬೇಕಾಗುವ ತೊಗರಿಬೇಳೆ ದರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200 ರೂ. ತಲುಪಿದ್ದು...

ಬೆಂಗಳೂರು: ದಿನ ನಿತ್ಯದ ಅಡುಗೆಗೆ ಅತ್ಯಗತ್ಯವಾಗಿ ಬೇಕಾಗುವ ತೊಗರಿಬೇಳೆ ದರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200 ರೂ. ತಲುಪಿದ್ದು, ಜನತೆ ಅಡುಗೆಗೆ ತೊಗರಿ ಬಳಸಲು ಹಿಂದೇಟು ಹಾಕುವಂತಾಗಿದೆ.
ತೊಗರಿ ಬೇಳೆಯ ದಿಢೀರ್ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತತ್ತರಿಸಿ ಹೊಗಿದ್ದಾರೆ. ಏರಿರಿುವ ತೊಗರಿ ಬೇಳೆ ಬೆಲೆ ಸದ್ಯಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕಲಬುರಗಿಯಲ್ಲಿ ಶೇ. 20ರಿಂದ 30ರಷ್ಟು ಮಾತ್ರ ಬೆಳೆ ಬಂದಿತ್ತು. ಅದರಲ್ಲೂ ಶೇ.50ರಷ್ಟು ರಫ್ತಾಗಿದ್ದ ಪರಿಣಾಮ ತೊಗರಿ ಬೆಲೆ ಗಗನಕ್ಕೇರಲು ಕಾರಣವಾಯಿತು.
ಇನ್ನು ತೊಗರಿ ಬೇಳೆ ದರದಿಂದ ಬೇಸತ್ತಿರುವ ಜನ ಬೇಳೆ ಬದಲು ಚಿಕನ್ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ, ತೊಗರಿ ಬೇಳೆಗಿಂತ ಚಿಕನ್ ರೇಟ್ ಕಡಿಮೆ ಇದೆ.
ಕಳೆದ 2 ತಿಂಗಳ ಹಿಂದೆ ಸಗಟು ದರದಲ್ಲಿ ಕೆ.ಜಿ.ಗೆ 120, ತಿಂಗಳ ಹಿಂದೆ 140 ರೂ. ಇದ್ದ ತೊಗರಿ ಏಕಾಏಕಿ ಇದೀಗ ಕೆ.ಜಿ.ಗೆ 200 ರೂ.ಗೆ ಏರಿಕೆದೆ. ದಿನದಿಂದ ದಿನಕ್ಕೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೂ ತೊಗರಿ ಸರಬರಾಜು ಕಡಿಮೆಯಾಗುತ್ತಿದೆ.
ದಿನವೊಂದಕ್ಕೆ 40ರಿಂದ 50 ಮೂಟೆ ಮಾರಾಟವಾಗುತ್ತಿತ್ತು. ಆದರೆ, ಕಳೆದ 15 ದಿನದಿಂದ ಕೇವಲ 5 ರಿಂದ 6 ಮೂಟೆ ಮಾತ್ರ ಮಾರಾಟವಾಗುತ್ತಿವೆ. ಅದರಲ್ಲೂ ಚಿಲ್ಲರೆ ವ್ಯಾಪಾರಿಗಳು 25 ಕೆ.ಜಿ.ಗಿಂತ ಹೆಚ್ಚಿಗೆ ಖರೀದಿಸುತ್ತಿಲ್ಲ.
ಒಂದೆಡೆ ತರಕಾರಿ ಬೆಲೆ ಕೂಡ ಗಗನ ಮುಖಿಯಾಗಿದೆ, ಈರುಳ್ಳಿ ದರ ಸ್ವಲ್ಪ ಕುಗ್ಗಿದೆ. ಹೀಗಾಗಿ ಏನು ತಿಂದು ಬದುಕಬೇಕು ಎಂದು ಜನ ಯೋಚಿಸುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


