ಜಿಲ್ಲಾ ಸುದ್ದಿ

ಒಂದೇ ದಿನ ರಾಜ್ಯದಲ್ಲಿ ನಾಲ್ವರು ರೈತರ ಆತ್ಮಹತ್ಯೆ

ಬೆಳೆನಾಶ ಮತ್ತು ಸಾಲಬಾಧೆಯಿಂದ ಕಂಗೆಟ್ಟು ನವರಾತ್ರಿಯ ಮೊದಲ ದಿನವೇ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆ...

ಒಂದೇ ದಿನ ರಾಜ್ಯದಲ್ಲಿ ನಾಲ್ವರು ರೈತರ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :
 ಬೆಂಗಳೂರು: ಬೆಳೆನಾಶ ಮತ್ತು ಸಾಲಬಾಧೆಯಿಂದ ಕಂಗೆಟ್ಟು ನವರಾತ್ರಿಯ ಮೊದಲ ದಿನವೇ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ವರದಾಹಳ್ಳಿಯ ಈಶ್ವರಪ್ಪ ಮಹಾ ದೇವಪ್ಪ ಉಳ್ಳಾಗಡ್ಡಿ (50) ವಿಷ ಸೇವಿಸಿದ್ದಾರೆ. ಧಾರವಾಡ ತಾಲೂಕು ಅಮ್ಮಿನಭಾವಿಯ ಶಿವಾನಂದ ಗುರುಸಿದ್ಧಪ್ಪ ಉಳ್ಳಿಗೇರಿ (45) ಮನೆ ಎದುರೇ ನೇಣು ಹಾಕಿಕೊಂಡಿದ್ದಾರೆ.ಬ್ಯಾಡಗಿ ತಾಲೂಕು ಕದಮನಹಳ್ಳಿಯ ನಾಗಪ್ಪ ತಳವಾರ (50) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯಜಿಲ್ಲೆ ಕೆ.ಆರ್. ಪೇಟೆ ತಾಲೂಕು ಬೂಕನಕೆರೆ ಹೋಬಳಿ ಗಂಜಿಗೆರೆ ಕೊಪ್ಪಲು ಗ್ರಾಮದ ಜವರೇಗೌಡ (55) ವಿಷ ಸೇವಿಸಿದ್ದಾರೆ.ಆತ್ಮಹತ್ಯೆ ಯತ್ನ: ಗೌರಿಬಿದನೂರು ತಾಲೂಕಿ ನ ಹೊಸೂರು ಬಳಿ ನಿರ್ಮಿಸಲು ಉದ್ದೇಶಿಸಿರುವ ವಿಜ್ಞಾನ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಮೂವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ. ಭೂಸ್ವಾಧೀನ ವಿರೋಧಿಸಿ ಗೌರಿಬಿದನೂರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅರಶಾಪುರದ ಲಕ್ಷ್ಮಮ್ಮ, ಮುದುಗೆರೆ ಕೃಷ್ಣಪ್ಪ ಹಾಗೂ ಹಕ್ಕಿಪಿಕ್ಕಿ ಕಾಲೊನಿಯ ರಾಮಚಂದ್ರಪ್ಪ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದರು. ಮಧ್ಯಪ್ರವೇಶಿಸಿ ದ ಪೊಲೀಸರು ರೈತರನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಹಕ್ಕಿಪಿಕ್ಕಿ ಕಾಲೊನಿ ಸಮೀಪದ ಅರಣ್ಯ ಭೂಮಿಯಲ್ಲಿ 60 ವರ್ಷಗಳಿಂದ ಸಾಗುವಳಿ ನಡೆಸುತ್ತಿದ್ದು, ಇದಕ್ಕೆ ಈವರೆಗೆ ಸಾಗುವಳಿ ಚೀಟಿ ನೀಡಿಲ್ಲ.
ಅಲ್ಲದೆ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಏಕಾಏಕಿ ಮುಂದಾಗಿರುವು ದರಿಂದ ರೈತರು ಆತ್ಮಹತ್ಯೆಗೆ ಮುಂದಾಗಿ ದ್ದಾರೆ. ತಹಸೀಲ್ದಾರ್ ಡಾ. ಎನ್. ಭಾಸ್ಕರ್ ಪ್ರತಿಭಟನಾಕಾರರೊಂದಿಗೆ ಮಾತ ನಾಡಿ, ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿರುವ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಭರವಸೆನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.