ಜಿಲ್ಲಾ ಸುದ್ದಿ

ಮಹಾದಾಯಿ ವಿಚಾರವಾಗಿ ಪ್ರಧಾನಿ ಮನವೊಲಿಕೆಗೆ ಸಿದ್ಧ

ಮಹದಾಯಿ ನದಿ ಜೋಡಣೆ ವಿಷಯವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗೋವಾ ಹಾಗೂ ಮಹಾರಾಷ್ಟ್ರದ...

ಮಹಾದಾಯಿ ವಿಚಾರವಾಗಿ ಪ್ರಧಾನಿ ಮನವೊಲಿಕೆಗೆ ಸಿದ್ಧ
ಬಿ.ಎಸ್ ಯಡಿಯೂರಪ್ಪ
Published On :

ನರಗುಂದ: ಮಹದಾಯಿ ನದಿ ಜೋಡಣೆ ವಿಷಯವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗೋವಾ ಹಾಗೂ ಮಹಾರಾಷ್ಟ್ರದ ವಿಪಕ್ಷಗಳನ್ನು ಒಪ್ಪಿಸೋದಾದ್ರೆ,  ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಪ್ಪಿಸುವಂತೆ ಎರಡೇ ದಿನದಲ್ಲಿ ಪ್ರಧಾನಿ ಮೋದಿ ಅವರ ಮನವೊಲಿಸಲಾಗುವುದು. ಆ ಜವಾಬ್ದಾರಿ ತಮ್ಮದು ಎಂದು ಯಡಿಯೂರಪ್ಪ ಹೇಳಿದ್ದಾರೆ.

87 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಜಯ ತಂದುಕೊಡಲು ಸಿದ್ಧ. ಕಾಂಗ್ರೆಸ್‌ ತನ್ನ ಭರವಸೆಗೆ ಬದ್ಧವಾದರೆ ನ್ಯಾಯಾಧಿಕರಣದ ಹೊರಗೆ ವಿವಾದ ಬಗೆಹರಿಸಲು ಸಿದ್ಧ ಎಂದು ಘೋಷಿಸಿದರು.

ಒಂದೆಡೆ ಸರ್ಕಾರದಿಂದ ಕಳಸಾ ನಾಲೆಗೆ ತಡೆಗೋಡೆ ನಿರ್ಮಿಸಿ, ಕಾಲುವೆ ಮುಚ್ಚಿ ಹಾಕುವುದಾಗಿ ಮಹದಾಯಿ ನ್ಯಾಯಾಧಿಕರಣಕ್ಕೆ ಅಫಿಡವಿಟ್‌ ಸಲ್ಲಿಸಲಾಗುತ್ತದೆ. ಮತ್ತೂಂದು ಕಡೆ ಪ್ರಧಾನಿ ಮೇಲೆ ಗೂಬೆ ಕೂರಿಸಲಾಗುತ್ತದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನಾಡಿನ ಜನರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ತುಘಲಕ್‌ ದರ್ಬಾರ್‌:
ತಮ್ಮ ಸರಕಾರವಿದ್ದಾಗ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ಹಜ್‌ ಯಾತ್ರಿಕರಿಗಾಗಿ 40 ಕೋಟಿ ರೂ. ವೆಚ್ಚದಲ್ಲಿ ಹಜ್‌ ಭವನ ನಿರ್ಮಾಣ ಹಾಗೂ ಕನಕ ಪೀಠದ ಅಭಿವೃದ್ಧಿಗೆ 30 ಕೋಟಿ ರೂ.ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಹಿಂದ ಹೆಸರಿನಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಗಾಂಧೀಜಿ, ಅಂಬೇಡ್ಕರ್‌ ಅವರನ್ನು ಮರೆತು ತಾವೇ ಎಲ್ಲ ಎಂಬಂತೆ ತುಘಲಕ್‌ ದರ್ಬಾರ್‌ ನಡೆಸುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ನಾಡಿನ ಐದು ಸಾವಿರ ಹಳ್ಳಿಗಳನ್ನು ಸುವರ್ಣ ಗ್ರಾಮ ಯೋಜನೆ ವ್ಯಾಪ್ತಿಗೆ ತಂದು ಅಭಿವೃದ್ಧಿಪಡಿಸಲಾಗಿತ್ತು. ಈಗ ಕಾಂಗ್ರೆಸ್‌ ಸರಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ. ಹಳ್ಳಿಗಳ ಅಭಿವೃದ್ಧಿ ಬಗ್ಗೆ ಸರಕಾರಕ್ಕೆ ಕಾಳಜಿಯಿಲ್ಲ. ತಾಕತ್ತಿದ್ದರೆ ಸ್ಥಗಿತಗೊಳಿಸಿರುವ ಯೋಜನೆ ಮರು ಆರಂಭಿಸಿ. ಹಳ್ಳಿಗಳ ಅಭಿವೃದ್ಧಿ ತಂತಾನೇ ಆಗುತ್ತದೆ ಎಂದು ಸವಾಲು ಹಾಕಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.