ಜಿಲ್ಲಾ ಸುದ್ದಿ

ಗುದ್ದೋಡಿದ್ದ ಬಿಪಿಒ ಉದ್ಯೋಗಿ ಸೆರೆ

ವೃದ್ಧೆ ಸಾವಿಗೆ ಕಾರಣವಾಗಿದ್ದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ತುಂಡಾಗಿ ಬಿದ್ದಿದ್ದ ಬೈಕ್ ನೋಂದಣಿ ಸಂಖ್ಯೆ...

Published On :
ಬೆಂಗಳೂರು: ವೃದ್ಧೆ ಸಾವಿಗೆ ಕಾರಣವಾಗಿದ್ದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ತುಂಡಾಗಿ ಬಿದ್ದಿದ್ದ ಬೈಕ್ ನೋಂದಣಿ ಸಂಖ್ಯೆ ಆಧಾರದ ಮೇಲೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಿಪಿಒ ಉದ್ಯೋಗಿಯನ್ನು ಮಡಿವಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ, ಆಂಧ್ರಪ್ರದೇಶದ ವಿಜಯವಾಡ ಮೂಲದ ಗುರುರಾಜ್ ಸಾಯಿ ವಂಶಿ ಬಂಧಿತ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ 75 ವರ್ಷದ ನಿರ್ಗತಿಕ ಮಹಿಳೆ ಎಲೆಕ್ಟ್ರಾನಿಕ್ ಸಿಟಿ ರೂಪೇನ ಅಗ್ರಹಾರ ಫ್ಲೈಒವರ್‍ನಲ್ಲಿ ರಸ್ತೆ ದಾಟುತ್ತಿದ್ದಳು. ಈ ವೇಳೆ ವೇಗವಾಗಿ ಬಂದ ಬೈಕ್‍ವೊಂದು ವೃ ಗುದ್ದಿ ಪರಾರಿಯಾಗಿತ್ತು. 
ತಲೆಗೆ ತೀವ್ರ ಪೆಟ್ಟಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಶವ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಘಟನೆ ವೇಳೆ ಸ್ಥಳೀಯರು ಡಿಕ್ಕಿ ಮಾಡಿದ ವಾಹನದ ನಂಬರ್ ಗಮನಿಸಿರಲಿಲ್ಲ. ಆದರೆ, ಸ್ಥಳ ಪರಿಶೀಲನೆ ನಡೆಸಿದಾಗ ವಾಹನ ನೋಂದಣಿ ಸಂಖ್ಯೆಯ 8 ತುಂಡುಗಳು ಸಿಕ್ಕಿದ್ದವು. ಅವುಗಳನ್ನು ಎತ್ತಿಕೊಂಡ ಪೊಲೀಸರು ಜೋಡಿಸಿ ನೋಡಿದಾಗ ಅದು ಆಂಧ್ರಪ್ರದೇಶದಲ್ಲಿ ನೋಂದಣಿಯಾದ ಬೈಕ್‍ನ ಸಂಖ್ಯೆ ಎಂಬುದು ಗೊತ್ತಾಗಿದೆ. 
ಕೂಡಲೇ ಆಂಧ್ರಪ್ರದೇಶ ಸಾರಿಗೆ ಇಲಾಖೆ ವೆಬ್‍ಸೈಟ್‍ನಲ್ಲಿ ವಿಜಯವಾವಾಡ ಸಾರಿಗೆ ಅಧಿಕಾರಿಗಳುನ್ನು ಸಂಪರ್ಕಿಸಿದ ಪೊಲೀಸರು ವಾಹನದ ಮಾಲೀಕರ ವಿಳಾಸ ಹಾಗೂ ಫೋನ್ ನಂಬರ್ ಸಂಪರ್ಕಿಸಿದ್ದರು. ಈ ವೇಳೆ ಡಿಕ್ಕಿ ಮಾಡಿ ಪರಾರಿಯಾಗಿದ್ದ ವ್ಯಕ್ತಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಎನ್ನುವುದು ಗೊತ್ತಾಗಿದೆ. ಗುರುರಾಜ್ ವಾಸವಿದ್ದ ಪೇಯಿಂಗ್ ಗೆಸ್ಟ್‍ಗೆ ತೆರಳಿದ ಪೊಲೀಸರು ಬಂಧಿಸಿದ್ದಾರೆ. 
ಡಿಕ್ಕಿ ಹೊಡೆದ ನಂತರ ವಾಹನ ನಿಲ್ಲಿಸಿ ವೃದ್ಧೆಯನ್ನು ನೋಡಿದೆ. ಆದರೆ, ಆಕೆ ಮೃತಪಟ್ಟಿದ್ದಳು. ಹೀಗಾಗಿ, ಭಿತಿಗೊಂಡು ಸ್ಥಳದಿಂದ ಪರಾರಿ ಯಾಗಿದ್ದಾಗಿ ವಿಚಾರಣೆ ವೇಳೆ ಗುರುರಾಜ್ ಹೇಳಿದ್ದಾನೆಂದು ಪೊಲೀಸರು ಹೇಳಿದರು. ಆರೋಪಿ ಮದ್ಯಪಾನ ಮಾಡಿರಲಿಲ್ಲ. ಆದರೆ, ನಿರ್ಲಕ್ಷ್ಯತನದಿಂದ ಅತಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಎನ್ನುವುದು ಕಂಡು ಬಂದಿದೆ ಎಂದು ಮಡಿವಾಳ ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.