ಜಿಲ್ಲಾ ಸುದ್ದಿ

104 ಕೋಟಿ ಮೌಲ್ಯದ ಭೂಮಿ ವಶ

ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ಶುಕ್ರವಾರ ಅಂದಾಜು ರು.104.90 ಕೋಟಿ ಮೌಲ್ಯದ 78.33 ಎಕರೆ ಭೂಮಿ ವಶಪಡಿಸಿಕೊಂಡಿದೆ...

104 ಕೋಟಿ ಮೌಲ್ಯದ ಭೂಮಿ ವಶ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ಶುಕ್ರವಾರ ಅಂದಾಜು  ರು.104.90 ಕೋಟಿ ಮೌಲ್ಯದ 78.33 ಎಕರೆ ಭೂಮಿ ವಶಪಡಿಸಿಕೊಂಡಿದೆ. ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ,ಯಲಚೇನಹಳ್ಳಿಯ ಸ.ನಂ.45 ರಲ್ಲಿ ರು. 15 ಕೋಟಿ ಮೌಲ್ಯದ 1.7 ಎಕರೆಯನ್ನು ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ತಂಡ ತೆರವುಗೊಳಿಸಿತು. ಉತ್ತರ (ಅಪರ) ತಾಲೂಕು, ಜಾಲ ಹೋಬಳಿ, ಎಂ.ಹೊಸಹಳ್ಳಿಯ ಸ.ನಂ.116ರ 4.5 ಎಕರೆ, ಮಹದೇವ ಕೊಡಿಗೇಹಳ್ಳಿಯ ಸ.ನಂ.194 ರ 6.24 ಎಕರೆ, ಬೇಗೂರು ಗ್ರಾಮದ ಸ.ನಂ.30 ರಲ್ಲಿ 9.5 ಎಕರೆ, ಹೊಸಹಳ್ಳಿಯ ಸ.ನಂ.54 ರಲ್ಲಿ 8.1 ಎಕರೆ ಜಾಗದ ಒತ್ತುವರಿಯನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಜಾಗ ಅಂದಾಜು ರು.27.90 ಕೋಟಿ ಮೌಲ್ಯ ಹೊಂದಿದೆ. ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಹಂಚರಹಳ್ಳಿಯ ಸ.ನಂ.20 ರಲ್ಲಿ 2.5 ಎಕರೆ, ರಘುಮೇನಹಳ್ಳಿಯ ಸ.ನಂ.13 ರಲ್ಲಿ 1.11 ಎಕರೆ, ಬೊಮ್ಮೇನಹಳ್ಳಿಯ ಸ.ನಂ.55 ರಲ್ಲಿ 9.25 ಎಕರೆ, ಬಿದರಹಳ್ಳಿ ಹೋಬಳಿ ತಿರುಮೇನಹಳ್ಳಿಯ ಸ.ನಂ.22 ರಲ್ಲಿ 14.5 ಎಕರೆ, ಸ.ನಂ.8ರಲ್ಲಿ 1 ಎಕರೆ, ಚಿಕ್ಕಬನಹಳ್ಳಿಯ ಸ.ನಂ.11 ರಲ್ಲಿ 12 ಎಕರೆ, ದೊಡ್ಡನೆಕ್ಕುಂದಿಯ ಸ.ನಂ.15
ರಲ್ಲಿ 1 ಎಕರೆ ಜಾಗದ ಒತ್ತುವರಿಯನ್ನು ತಹಸೀಲ್ದಾರ್ ಡಾ.ಹರೀಶ್ ನಾಯ್ಕ್  ತಂಡ ತೆರವುಗೊಳಿಸಿತು.
ಈ ಜಾಗ ಅಂದಾಜು ರು.40 ಕೋಟಿ ಮೌಲ್ಯ ಹೊಂದಿದೆ. ಆನೇಕಲ್ ತಾಲೂಕು, ಸಜಾಪುರ ಹೋಬಳಿ, ಎಸ್.ಮೇಡಹಳ್ಳಿಯ ಸ.ನಂ.158 ರಲ್ಲಿ 10 ಎಕರೆ, ಅತ್ತಿಬೆಲೆ ಹೋಬಳಿ ನೆರಳೂರು ಗ್ರಾಮದ ಸ.ನಂ.142 ರಲ್ಲಿ 11.25 ಎಕರೆ, ಕಸಬಾ ಹೋಬಳಿ, ಕಮ್ಮಸಂದ್ರದ ಸ.ನಂ.39 ರಲ್ಲಿ ಸ್ಮಶಾನ ಜಾಗ 1.20 ಎಕರೆ, ಅತ್ತಿಬೆಲೆ ಹೋಬಳಿ, ದಾಸನಪುರದ ಸ.ನಂ.97 ರಲ್ಲಿ 2.14 ಎಕರೆ, ಅರೇಹಳ್ಳಿಯ ನಕಾಶೆ ದಾರಿ 1 ಎಕರೆ ಜಾಗವನ್ನು ತಹಸೀಲ್ದಾರ್ ಅನಿಲ್ ಕುಮಾರ್ ನೇತೃತ್ವದ ತಂಡ ತೆರವು ಮಾಡಿತು. ಈ ಜಾಗ ರು.22 ಕೋಟಿ ಮೌಲ್ಯ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.