ಜಿಲ್ಲಾ ಸುದ್ದಿ

ಶಿವರಾಜ ಶಾಸ್ತ್ರಿ, ಜಯಶ್ರೀಗೆ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2015-16ನೇ ಸಾಲಿನ `ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ಗೌರವ ಪ್ರಶಸ್ತಿಗೆ...

ಶಿವರಾಜ ಶಾಸ್ತ್ರಿ, ಜಯಶ್ರೀಗೆ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2015-16ನೇ ಸಾಲಿನ `ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ಗೌರವ ಪ್ರಶಸ್ತಿಗೆ ಸುಗಮ ಸಂಗೀತ ಕ್ಷೇತ್ರದಿಂದ ಬೆಂಗಳೂರಿನ ಎಂ.ಕೆ. ಜಯಶ್ರೀ, ಕಥಾ ಕೀರ್ತನ ಕ್ಷೇತ್ರದಿಂದ ಕೊಪ್ಪಳದ ಶಿವರಾಜ ಶಾಸ್ತ್ರಿಗೆ ಈ ವರ್ಷದ ಗೌರವ ಪ್ರಶಸ್ತಿ ಸಂದಿದೆ. ಪ್ರದಾನ ಸಮಾರಂಭ ಡಿ.19 ರಂದು ನಡೆಯಲಿದೆ ಎಂದು ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ತಿಳಿಸಿದ್ದಾರೆ.

ಕರ್ನಾಟಕ ಕಲಾಶ್ರೀ' ಪ್ರಶಸಿ ಪುರಸ್ಕೃತರು:
ಕರ್ನಾಟಕ ಸಂಗೀತ ವಿಭಾಗದಲ್ಲಿ ಬೆಂಗಳೂರಿನ ಗುಡಿಬಂಡೆ ಕುಮಾರಸ್ವಾಮಿ ಹಾಡುಗಾರಿಕೆ, ಮೈಸೂರಿನ ರಾಜಲಕ್ಷ್ಮಿ ಶ್ರೀಧರ್ -ಹಾಡುಗಾರಿಕೆ, ಮಂಗಳೂರಿನ ಎಂ.ಆರ್. ಸಾಯಿನಾಥ್, ಚಿಕ್ಕಬಳ್ಳಾಪುರದ ವಿರೂಪಸಂದ್ರ ಗೋಪಾಲಕೃಷ್ಣಾಚಾರ್, ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಶಿವಮೊಗ್ಗ ದ ಹುಮಾಯಾನ್ ಹರ್ಲಾಪುರ-ಗಾಯನ, ಶಿರಸಿಯ ಆರ್.ವಿ. ಹೆಗಡೆ-ರುದ್ರವೀಣೆ, ಬಾಗಲಕೋಟೆಯ ವಾದಿರಾಜ್ ನಿಂಬರಗಿ-ವಯೋಲಿನ್, ರಾಯಚೂರಿನ ಈರಣ್ಣ ಜಾಲಿಬೆಂಚಿ-ತಬಲಾ, ನೃತ್ಯ ವಿಭಾಗದಲ್ಲಿ ಚಾಮರಾಜ ನಗರದ ಉಷಾ ವೇಣುಗೋಪಾಲ್, ಬೆಂಗಳೂರಿನ ಎ.ಎನ್.ಸುಧೀರ್‍ಕುಮಾರ್, ಬೆಂಗಳೂರಿನ ರಮಾ ಜಗನ್ನಾಥ್-ನೃತ್ಯಕ್ಕೆ ಗಾಯನ, ಸುಗಮ ಸಂಗೀತ ವಿಭಾಗದಲ್ಲಿ ಮೈಸೂರಿನ ಜಿ.ಪುಷ್ಪಲತಾ, ಕಥಾಕೀರ್ತನದಲ್ಲಿ ತುಮಕೂರಿನ ಎನ್.ಕೆ.ಮೋಹನ್, ಗಮಕ ವಿಭಾಗದಲ್ಲಿ ಬೆಂಗಳೂರಿನ ಎ.ವಿ. ಪ್ರಸನ್ನ, ನಿರ್ಮಲ ಪ್ರಸನ್ನ, ಮೈಸೂರಿನ ಕೃಷ್ಣಗಿರಿ ರಾಮಚಂದ್ರ ಹಾಗೂ ಸಂಘ ಸಂಸ್ಥೆ ಪ್ರಶಸ್ತಿಗೆ ಬೆಂಗಳೂರಿನ ಶ್ರೀರಾಮ ಲಲಿತ ಕಲಾ ಮಂದಿರ ಆಯ್ಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.