ಜಿಲ್ಲಾ ಸುದ್ದಿ

ಪಾಷಣದಿಂದ ಹಲ್ಲುಜ್ಜಿ ಮಹಿಳೆ ಸಾವು

ಟೂತ್‍ಪೇಸ್ಟ್ ಎಂದು ತಿಳಿದು ಇಲಿ ಪಾಷಣದಿಂದ ಹಲ್ಲು ಉಜ್ಜಿ ಅಸ್ವಸ್ಥರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು...

ಪಾಷಣದಿಂದ ಹಲ್ಲುಜ್ಜಿ ಮಹಿಳೆ ಸಾವು
ಸಾಂದರ್ಭಿಕ ಚಿತ್ರ
Published On :
ಮೈಸೂರು: ಟೂತ್‍ಪೇಸ್ಟ್ ಎಂದು ತಿಳಿದು ಇಲಿ ಪಾಷಣದಿಂದ ಹಲ್ಲು ಉಜ್ಜಿ ಅಸ್ವಸ್ಥರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 
ಮೈಸೂರು ತಾಲೂಕು ಮೆಲ್ಲಹಳ್ಳಿ ನಿವಾಸಿ ಕೃಷ್ಣ ಎಂಬವರ ಪತ್ನಿ ಹೇಮಾವತಿ (35) ಮೃತಪಟ್ಟವರು. ಇವರು ಮನೆಯಲ್ಲಿದ್ದ ಇಲಿ ಪಾಷಣವನ್ನು ಟೂತ್‍ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿ ಅಸ್ವಸ್ಥರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈಗ ಇಲಿ ಪಾಷಣವು ಟೂತ್‍ಪೇಸ್ಟ್ ಮಾದರಿಯಲ್ಲಿ ಬರುತ್ತಿದ್ದು, ಇಲಿಗಳ ಕಾಟ ನಿಯಂತ್ರಿಸಲು ಬಚ್ಚಲು ಮನೆಗಳಲ್ಲಿ ಈ ಪಾಷಣವನ್ನು ಇರಿಸಲಾಗುತ್ತಿದೆ. ಮುಂಜಾನೆ ಎದ್ದೇಳುವ ಮಹಿಳೆಯರು ಟೂತ್‍ಪೇಸ್ಟ್ ಎಂದು ತಿಳಿದು ಇಲಿ ಪಾಷಣವನ್ನು ಹಾಕಿ ಹಲ್ಲು ಉಜ್ಜಿ ಅಸ್ವಸ್ಥರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.