ಜಿಲ್ಲಾ ಸುದ್ದಿ

ಜಾನುವಾರುಗಳನ್ನು ಕಟ್ಟಿ, ಅಡುಗೆ ಮಾಡಿ ರೈತ ಸಂಘ ಪ್ರತಿಭಟನೆ

2005ರಲ್ಲಿ ಬಿಡಿಎ ಅಧಿ ಸೂಚನೆ ಹೊರಡಿಸಿದ ಹೊಸೂರು- ತುಮಕೂರು ರಸ್ತೆ ಯೋಜನೆ ಕಾಮಗಾರಿ ಪ್ರಾರಂಭಿಸಿ ರಸ್ತೆ ಮಾಡಿ, ಇಲ್ಲವೇ ಕಾಮಗಾರಿ ರದ್ದು ಮಾಡಿ ಭೂಮಿಯನ್ನು,...

ಜಾನುವಾರುಗಳನ್ನು ಕಟ್ಟಿ, ಅಡುಗೆ ಮಾಡಿ ರೈತ ಸಂಘ ಪ್ರತಿಭಟನೆ
ರೈತ ಸಂಘ ವಿನೂತನ ಪ್ರತಿಭಟನೆ
Published On :

2005ರಲ್ಲಿ ಬಿಡಿಎ ಅಧಿ ಸೂಚನೆ ಹೊರಡಿಸಿದ ಹೊಸೂರು- ತುಮಕೂರು ರಸ್ತೆ ಯೋಜನೆ ಕಾಮಗಾರಿ ಪ್ರಾರಂಭಿಸಿ ರಸ್ತೆ ಮಾಡಿ, ಇಲ್ಲವೇ ಕಾಮಗಾರಿ ರದ್ದು ಮಾಡಿ ಭೂಮಿಯನ್ನು ರೈತರಿಗೆ ವಾಪಸ್ ನೀಡಿ ಎಂದು ರೈತಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಎದುರು ಬುಧವಾರ ಕುರಿ ಮತ್ತು ಜಾನುವಾರುಗಳನ್ನು ಕಟ್ಟಿಹಾಕಿ ಹಾಗೂ ಅಡುಗೆ ತಯಾರಿಗೆ ಸಿದ್ದತೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿತು.

ಸಂಘಟನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, 2005ರಲ್ಲಿ ರೂ 1,200 ಕೋಟಿ ಇದ್ದ ಕಾಮಗಾರಿ ವೆಚ್ಚ ಪ್ರಸಕ್ತ 11 ಸಾವಿರ ಕೋಟಿಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ರಾಜಕೀಯ ನಾಯಕರ ಹಿತಾಸಕ್ತಿಗಾಗಿ ಕಾಮಗಾರಿಯನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ದೂರಿದರು. ಕಾಮಗಾರಿ ಆರಂಭಿಸಿದ ದಿನದಿಂದಲೂ ರೈತರು ಜಮೀನಿನಲ್ಲಿ ಕೃಷಿ ಮಾಡುವಂತಿಲ್ಲ, ಭೂಮಿ ಮೇಲೆ ಸಾಲ ಪಡೆಯಲು ಅಥವಾ ಪರವಾನಗಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದೊದಗಿದೆ. ಖಾಸಗಿ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳಾಗಲಿ ಸಾಲ ನೀಡಲು ಮುಂದೆ ಬರುತ್ತಿಲ್ಲ. ಬಿಡಿಎ ಆಯುಕ್ತರನ್ನು ಕೇಳಿದರೆ ಸರ್ಕಾರದಲ್ಲಿ ಹಣವಿಲ್ಲ ಎಂದು ಕಾರಣವೊಡ್ಡಿ ಕಾಮಗಾರಿಯನ್ನು ಮುಂದೂಡುವ ತಂತ್ರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

2005ರಿಂದ ಈವರೆಗೆ ಆರು ಮುಖ್ಯಮಂತ್ರಿಗಳು ಮತ್ತು ಐವರು ಬಿಡಿಎ ಆಯುಕ್ತರು ಬದಲಾಗಿದ್ದಾರೆ. ಅಧಿಕಾರಿಗಳು ಬದಲಾದಂತೆ ಯೋಜನೆಯ ರೂಪುರೇಷೆಗಳು ಸಹ ಬದಲಾಗುತ್ತಿವೆ. ಕಾಮಗಾರಿ ಆರಂಭಿಸುವಂತೆ ಹೈಕೋರ್ಟ್ ಸೂಚನೆ ನೀಡಿದರೂ ನ್ಯಾಯಾಂಗದ ಆದೇಶಕ್ಕೆ ಕಿಮ್ಮತ್ತಿಲ್ಲ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣಗಳಿಂದಾಗಿ ಯೋಜನೆ ಪ್ರಾರಂಭಿಸುತ್ತೀರೋ ಇಲ್ಲವೋ ಎಂಬ ವಿಷಯವನ್ನು ಮನದಟ್ಟು ಮಾಡಿಕೊಳ್ಳಲು ಧರಣಿ ಕೂರುವ ಸ್ಥಿತಿ ಎದುರಾಗಿದೆ. ರೈತರ ಬೇಡಿಕೆಗಳು: ರಸ್ತೆ ಯೋಜನೆಯನ್ನು  ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಈಗಾಗಲೇ ಗುರುತು ಮಾಡಿರುವ 100 ಮೀಟರ್ ಭೂಮಿಯನ್ನು 75 ಮೀಟರ್‍ಗೆ ಇಳಿಸಬೇಕು. ಪ್ರಸ್ತುತ ಭೂಮಿ ಬೆಲೆ ತಿಳಿದು ಪರಿಹಾರ ನೀಡಬೇಕು, ಇದೆಲ್ಲ ಸಾಧ್ಯವಾಗದಿದ್ದರೆ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು, ರೈತ ಮುಖಂಡರು ಆಗಮಿಸಿದ್ದರು

ಸಿಎಂಗೇ ಗೊತ್ತಿರಲಿಲ್ಲ!
ಯೋಜನೆಯ ಬಗ್ಗೆ ಪೂರ್ತಿ ಪ್ರಮಾಣದಲ್ಲಿ ತಿಳಿದಿರಲಿಲ್ಲ. ಈಗ ನೀವು (ರೈತ ಸಂಘ) ತಿಳಿಸಿರುವುದರಿಂದ ಮುಂದಿನ ಆರು ತಿಂಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುವುದು. ದಸರಾ ಹಾಗೂ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ನಂತರ ಯೋಜನೆ ಬಗ್ಗೆ ಮುಂದಿನ ರೂಪುರೇಷೆಗಳನ್ನು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.