ಜಿಲ್ಲಾ ಸುದ್ದಿ

23 ರಂದೇ ದಸರಾ ಜಂಬೂ ಸವಾರಿ: ವಿರೋಧಕ್ಕೆ ಮಣಿದ ಸರ್ಕಾರ

ತೀವ್ರ ವಿರೋಧದ ನಂತರ ಅಕ್ಟೋಬರ್‌ 23 ರಂದು ಅಂದರೇ ವಿಜಯದಶಮಿಯಂದೇ ಜಂಬೂಸವಾರಿ ನಡೆಸಲು ಸರ್ಕಾರ ನಿರ್ಧರಿಸಿದೆ.

23 ರಂದೇ ದಸರಾ ಜಂಬೂ ಸವಾರಿ: ವಿರೋಧಕ್ಕೆ ಮಣಿದ ಸರ್ಕಾರ
ಜಂಬೂ ಸವಾರಿ (ಸಂಗ್ರಹ ಚಿತ್ರ)
Published On :

ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ದಿನಾಂಕ ಬದಲಾವಣೆ ಮಾಡಿದ್ದ ಸರ್ಕಾರ ಸಾರ್ವಜನಿಕರು ಮತ್ತು ರಾಜಮನೆತನದ ವಿರೋಧಕ್ಕೆ ಮಣಿದು ಮತ್ತೆ ಅಕ್ಟೋಬರ್‌ 23 ರಂದು ಅಂದರೇ ವಿಜಯದಶಮಿಯಂದೇ ಜಂಬೂಸವಾರಿ ನಡೆಸಲು ನಿರ್ಧರಿಸಿದೆ.

ಮೈಸೂರು ಅರಮನೆ ಜ್ಯೋತಿಷಿಗಳ ಸಲಹೆಯಂತೆ ಅಕ್ಟೋಬರ್ 22ರಂದೇ ವಿಜಯದಶಮಿ ಮತ್ತು ಜಂಬೂಸವಾರಿ ನಡೆಸುವುದಾಗಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದರು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಮೈಸೂರು ಜನರು ಹಾಗೂ ರಾಣಿ ಪ್ರಮೋದಾದೇವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಒಂದು ದಿನ ಮುಂಚಿತವಾಗಿ ಜಂಬೂ ಸವಾರಿ ನಡೆಯುವ ಕುರಿತಾಗಿ ಗೊಂದಲ ನಿರ್ಮಾಣವಾಗಿ ರಾಜಮನೆತನ ಮತ್ತು ಸರ್ಕಾರದ ಭಾನುವಾರ ಸಭೆ ನಡೆಸಿತು.

ಸಭೆಯಲ್ಲಿ ರಾಣಿ ಪ್ರಮೋದಾದೇವಿ ಮತ್ತು ಸರ್ಕಾರದ ಪರವಾಗಿ ಸಚಿವ ವಿ.ಶ್ರೀನಿವಾಸ್ ಅವರು ಪಾಲ್ಗೊಂಡಿದ್ದರು. ಜ್ಯೋತಿಷಿಗಳ ಮಾತು ಕೇಳಿ ರಾಜ್ಯ ಸರ್ಕಾರ ಆಯುಧಪೂಜೆಯ ದಿನದಂದೇ ಜಂಬೂಸವಾರಿ ನಡೆಸುವ ತೀರ್ಮಾನ ಮಾಡಿದೆ ಎಂಬ ಮಾತುಗಳು ಕೇಳಿಬಂದಿದ್ದು, ಇದಕ್ಕೆ ಇತಿಹಾಸ ತಜ್ಞರಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ವಿಜಯ ದಶಮಿಯಂದೇ ಜಂಬೂ ಸವಾರಿ ನಡೆಸಲು ತೀರ್ಮಾನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.