ಜಂಬೂಸವಾರಿ ದಿನಾಂಕ ಬದಲಿಸಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ
ಮೈಸೂರು ದಸರಾದಲ್ಲಿ ಆಯುಧ ಪೂಜೆ ದಿನದಂದೇ ಜಂಬೂ ಸವಾರಿ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು...

ಮೈಸೂರು: ಮೈಸೂರು ದಸರಾದಲ್ಲಿ ಆಯುಧ ಪೂಜೆ ದಿನದಂದೇ ಜಂಬೂ ಸವಾರಿ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಇತಿಹಾಸಕಾರ ಪ್ರೊ.ನಂಜರಾಜ ಅರಸ್, ತೀವ್ರವಾಗಿ ವಿರೋಧಿಸಿದ್ದಾರೆ. ಸರ್ಕಾರ ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ನಡೀತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಅಕ್ಟೋಬರ್ 14ರಂದು ದಸರಾ ಉದ್ಘಾಟನೆಯಾಗಲಿದ್ದು, 23ಕ್ಕೆ ಜಂಬೂಸವಾರಿ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಅ.23ರಂದು ಏಕಾದಶಿ ಇರುವುದರಿಂದ ದಿನಾಂಕ ಬದಲಾವಣೆಯಾಗಿದೆ. ಆದ್ದರಿಂದ ಅ.22ರಂದು ಜಂಬೂ ಸವಾರಿ ನಡೆಯಲಿದೆ. ಅಕ್ಟೋಬರ್ 22 ರಂದೇ ಆಯುಧ ಪೂಜೆ ಹಾಗೂ ಜಂಬು ಸವಾರಿ ನಡೆಯಲಿದೆ ಎಂದು ಶುಕ್ರವಾರ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದರು. ಈ ಮೊದಲು ಅಕ್ಟೋಬರ್ 23ರಂದು ವಿಜಯದಶಮಿ ಇದ್ದು ಅಂದೇ ಜಂಬೂಸವಾರಿ ನಡೆಸಲು ನಿರ್ಧರಿಸಲಾಗಿತ್ತು. ಅಕ್ಟೋಬರ್ 13 ರಿಂದ 22ರ ತನಕ ಈ ಬಾರಿಯ ದಸರಾ ನಡೆಯಲಿದ್ದು, 22ರಂದು ಜಂಬೂ ಸವಾರಿ ನಡೆಯಲಿದೆ.
ಇದೀಗ ರಾಜ್ಯ ಸರ್ಕಾರ ಅರಮನೆ ಜ್ಯೋತಿಷಿಗಳ ಪಂಚಾಂಗದ ಪ್ರಕಾರ ದಿನಾಂಕ ಬದಲಾಯಿಸಿರುವುದಕ್ಕೆ ಮೈಸೂರಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಅರಮನೆ ಜ್ಯೋತಿಷಿಗಳ ಸಲಹೆ ಮೇರೆಗೆ ಸರ್ಕಾರ ದಸರಾ ದಿನಾಂಕ ಬದಲಾವಣೆ ಮಾಡಿದರೆ, ಅಕ್ಟೋಬರ್ 23ರಂದು ಸರ್ಕಾರ ಯಾವ ಕಾರ್ಯಕ್ರಮ ನಡೆಸುತ್ತದೆ ಎಂದು ನಂಜರಾಜೇ ಅರಸ್ ಪ್ರಶ್ನಿಸಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಮೈಸೂರು ಅರಮನೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಅ.22ರಂದು ಅರಮನೆಯಲ್ಲಿ ಹಲವಾರು ಸಾಂಪ್ರದಾಯಿಕ ಕಾರ್ಯಕ್ರಮಗಳಿವೆ. ಅಂದೇ ಸರ್ಕಾರ ಜಂಬೂ ಸವಾರಿ ನಡೆಸಿದರೆ ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹೇಗೆ?' ಎಂದು ಅವರು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


