ಎತ್ತಿನಹೊಳೆ ವಿರುದ್ಧ ಒಗ್ಗಟ್ಟಾದ ಸಂಘಟನೆಗಳಿಂದ ಜೈಲ್ ಭರೋ
ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟಕ್ಕೆ ಬಲ ಹೆಚ್ಚಿಸಲು ಜಿಲ್ಲೆಯ ವಿವಿಧ 19 ಸಂಘಟನೆಗಳು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ರಚಿಸಿಕೊಂಡಿವೆ...

ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟಕ್ಕೆ ಬಲ ಹೆಚ್ಚಿಸಲು ಜಿಲ್ಲೆಯ ವಿವಿಧ 19 ಸಂಘಟನೆಗಳು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ರಚಿಸಿಕೊಂಡಿವೆ.
ಇದರ ನೇತೃತ್ವದಲ್ಲಿ ಅ.15ರಂದು ನಗರದ ಪಂಪ್‍ವೆಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಜೈಲ್‍ಭರೋ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಒಕ್ಕೂಟ ರಚನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟ ಸಂಚಾಲಕ ಡಾ. ನಿರಂಜನ ರೈ, ಅಂದು ಬೆಳಗ್ಗೆ 10.30ಕ್ಕೆ ದ.ಕ, ಉಡುಪಿ ಜಿಲ್ಲೆಗಳಿಂದ ಆಗಮಿಸುವ ಜನತೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸುವರು. ಅದಕ್ಕೂ ಮೊದಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳು ಎತ್ತಿನಹೊಳೆ ಯೋಜನೆ ವಿರುದ್ಧ ನಿರ್ಣಯ ಕೈಗೊಳ್ಳಲಿವೆ. ಈಗಾಗಲೇ 43 ಗ್ರಾಪಂಗಳು ಇದರ ವಿರುದ್ಧ ನಿರ್ಣಯ ಕೈಗೊಂಡಿವೆ. ನಿರ್ಣಯ ಕೈಗೊಳ್ಳದ ಪಂಚಾಯ್ತಿಗೆ ಬಹಿಷ್ಕಾರ ಅಥವಾ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಚೆನ್ನೈ ಹಸಿರು ಪೀಠದ ಆದೇಶ ಹೊರತೂ ಎತ್ತಿನಹೊಳೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಕೋರ್ಟಿನಲ್ಲಿ ಕಾಮಗಾರಿ ನಡೆಸುವುದಿಲ್ಲ ಎಂದ ಗುತ್ತಿಗೆ ಸಂಸ್ಥೆ ಕಾಮಗಾರಿ ಮುಂದುವರಿಸಿದೆ. ಈ ಬಗ್ಗೆ ಪ್ರಶ್ನಿಸಿದರೆ, ತಾನು ಅರಣ್ಯದ ಬದಲು ಖಾಸಗಿ ಸ್ಥಳದಲ್ಲಿ ಕಾಮಗಾರಿ ನಡೆಸುತ್ತಿರುವುದಾಗಿ ಸಮಜಾಯಿಸಿ ನೀಡುತ್ತಿದೆ. ಅರಣ್ಯ, ಪರಿಸರ ಇಲಾಖೆಯ ನಿರಕ್ಷೇಪಣಾ ಪತ್ರ ಇಲ್ಲದೆ ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ. ಈ ಹೋರಾಟದಲ್ಲಿ ಪ್ರತಿ ಮನೆಯಿಂದ ಬೆಂಬಲ ಕೋರಲಾಗುವುದು ಎಂದು ಹೇಳಿದರು.
ಸಂರಕ್ಷಣಾ ವಲಯ ಘೋಷಿಸಿ: ಸಹ್ಯಾದ್ರಿ ಸಂಚಯ ಸಂಚಾಲಕ ದಿನೇಶ್ ಹೊಳ್ಳ ಮಾತನಾಡಿ, ಎತ್ತಿನಹೊಳೆಯ 4ರಲ್ಲಿ ಒಂದು ಅಣೆಕಟ್ಟೆ ನಿರ್ಮಿಸಿದ್ದಾರೆ. 12 ಅಡಿ ಎತ್ತರದ ಪೈಪು ಹಾಕಿದ್ದಾರೆ. ಶೇ.1ರಷ್ಟು ಕಾಮಗಾರಿ ಆರಂಭವಾಗಿದೆ. ಈಗ ಹೋರಾಟ ನಡೆಸಿದರೆ ಇನ್ನೂ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿದೆ. ಶಾಶ್ವಾತ ನೀರಾವರಿಗೆ ಆಗ್ರಹಿಸುವ ಚಿಕ್ಕಬಳ್ಳಾಪುರ ಜನತೆ ಎತ್ತಿನಹೊಳೆ ಯೋಜನೆ ಬೇಡ ಎನ್ನುತ್ತಿದ್ದಾರೆ. ಈ ಯೋಜನೆಯಲ್ಲಿ ನೀರಿಲ್ಲದಿದ್ದರೆ ಪರಮ0 ಶಿವಯ್ಯ ಯೋಜನೆ ಜಾರಿಗೊಳಿಸಲು ಸರ್ಕಾರ ಸಿದಟಛಿತೆ ಮಾಡಿದಂತಿದೆ ಎಂದು ಆರೋಪಿಸಿದರು. ಆದ್ದರಿಂದ ಕುದುರೆಮುಖ ದಿಂದ ಪುಷ್ಪಗಿರಿವರೆಗೆ ನೇತ್ರಾವತಿ ಸಂರಕ್ಷಣಾ ವಲಯ ಎಂದು ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸುವುದಾಗಿ ಹೇಳಿದರು.
ಎತ್ತಿನಹೊಳೆ ವಿರುದ್ಧ ಉಡುಪಿಯಿಂದ ದ.ಕ. ಹಾಗೂ ಸಕಲೇಶಪುರ ವರೆಗೆ ಖಾಸಗಿ ಜಾಗಗಳಲ್ಲಿ ನೇತ್ರಾವತಿ ಉಳಿಸಿ ಬ್ಯಾನರ್ ಅಳವಡಿಸಲಾಗುವುದು. ಖಾಸಗಿಯವರೇ ಈ ಬ್ಯಾನರ್ ಅಳವಡಿಸಲಿದ್ದಾರೆ. ಈ ಮೂಲಕವೂ ಎತ್ತಿನಹೊಳೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುವುದು. ಅಲ್ಲದೆ ಬಯಲುಸೀಮೆ ಮಂದಿಯನ್ನು ಎತ್ತಿನಹೊಳೆಗೆ ಕರೆಸಿ ಅಲ್ಲಿನ ನೀರಿನ ವಾಸ್ತವಾಂಶವನ್ನು ಮನದಟ್ಟು ಮಾಡುವ ಪ್ರಯತ್ನ ನಡೆಸಲಾಗುವುದು. ನೀರಾವರಿ ತಜ್ಞರ ಮತ್ತು ಅಧಿಕಾರಿಗಳ ಸಭೆಯನ್ನು ಸರ್ಕಾರ ಬೆಂಗಳೂರು ಬದಲು ಮಂಗಳೂರಲ್ಲಿ ನಡೆಸುವಂತೆ ಆಗ್ರಹಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


