ಜಿಲ್ಲಾ ಸುದ್ದಿ

ಹೋ.ಶ್ರೀನಿವಾಸಯ್ಯಗೆ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಗಾಂಧೀಜಿ ಮಾದರಿಯಲ್ಲಿ ಸರಳ ಜೀವನ ನಡೆಸುವುದಕ್ಕೆ ನಮ್ಮಿಂದ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...

ಹೋ.ಶ್ರೀನಿವಾಸಯ್ಯಗೆ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಗಾಂಧೀವಾದಿ ಡಾ.ಹೋ.ಶ್ರೀನಿವಾಸಯ್ಯಅವರಿಗೆ `ಗಾಂಧೀ ಸೇವಾ ಪ್ರಶಸ್ತಿ' ಪ್ರದಾನ ಮಾಡಿದರ
Published On :

ಬೆಂಗಳೂರು: ಗಾಂಧೀಜಿ ಮಾದರಿಯಲ್ಲಿ ಸರಳ ಜೀವನ ನಡೆಸುವುದಕ್ಕೆ ನಮ್ಮಿಂದ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಹಿರಿಯ ಗಾಂಧೀವಾದಿ, ಗಾಂಧೀಭವನದ ಅಧ್ಯಕ್ಷ ಡಾ.ಹೋ.ಶ್ರೀನಿವಾಸಯ್ಯ ಅವರಿಗೆ ಸರ್ಕಾರದಿಂದ ರು.5ಲಕ್ಷ ನಗದು ಮತ್ತು ಫಲತಾಂಬೂಲ ಒಳಗೊಂಡ `ಗಾಂಧಿ ಸೇವಾ ಪ್ರಶಸ್ತಿ' ವಿತರಿಸಿ ಅವರು ಮಾತನಾಡಿದರು. ಗಾಂಧೀಜಿ ಸೇವಿಸುತ್ತಿದ್ದದ್ದು ಊಟ, ಆಡಿನ ಹಾಲು, ಕಡ್ಲೇಕಾಯಿ, ಬೆಲ್ಲ ಮಾತ್ರ. ಅದಕ್ಕಿಂತ ಹೆಚ್ಚು ಆಹಾರ ಅವರು ಸೇವಿಸುತ್ತಿರಲಿಲ್ಲ ಆದ್ದರಿಂದಲೇ ಅವರು ಹೆಚ್ಚು ಕ್ರಿಯಾಶೀಲರಾಗಿದ್ದರು ಎಂದರು.

ಶ್ರೀನಿವಾಸಯ್ಯ ಅವರು `ಗಾಂಧಿ ಸೇವಾ ಪ್ರಶಸ್ತಿ' ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಅವರು ಮತ್ತು ಅವರ ಬೆಂಬಲಿಗರು ಗಾಂಧೀವಾದಿಗಳು ಎಂದು ಹೇಳಿಕೊಳ್ಳಬಹುದು. ಆದರೆ ಎಲ್ಲರೂ ಸುಮ್ಮನೆ ಗಾಂಧಿೀವಾದಿಗಳು ಎಂದುಕೊಳ್ಳುವುದರಲ್ಲಿ ಅರ್ಥವಿಲ ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್. ಕೆ.ಪಾಟೀಲ್ ಮಾತನಾಡಿ, ಗಾಂಧೀಜಿ ಅವರು ಗ್ರಾಮ ಸ್ವರಾಜ್, ಸ್ವಚ್ಛತೆಯ ಕನಸು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ವಿವರಿಸಿದರು. ಪ್ರಶಸ್ತಿ ಸ್ವೀಕರಿಸಿದ ಗಾಂಧೀವಾದಿ ಹೋ.ಶ್ರೀನಿವಾಸಯ್ಯ, ನನಗೆ ಸಿಕ್ಕಿರುವ ಸರ್ಕಾರದ ಈ ಪುರಸ್ಕಾರವನ್ನು ಈ ಸಮಾಜದ ಕೆಲಸಕ್ಕೆ ಅರ್ಪಿಸುವುದಾಗಿ ಪ್ರಕಟಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.