ಜಿಲ್ಲಾ ಸುದ್ದಿ

ಜಗತ್ತಿನ ಸಮಸ್ಯೆಗಳಿಗೆ ಗಾಂಧಿ ಆದರ್ಶ ಪರಿಹಾರ

ಮಹಾತ್ಮ ಗಾಂಧೀಜಿ ಅವರು ಜಗತ್ತು ಕಂಡ ಶ್ರೇಷ್ಠ ಚಿಂತಕ ಮತ್ತು ದಾರ್ಶನಿಕ. ದೇಶ ಹಾಗೂ ಸಮಾಜಕ್ಕಾಗಿ ಹೋರಾಡಿದ ಅವರ ವಿಚಾರಧಾರೆಗಳು ದಿನೇ ದಿನೇ ಪ್ರಸ್ತುತವಾಗುತ್ತಿವೆ...

ಜಗತ್ತಿನ ಸಮಸ್ಯೆಗಳಿಗೆ ಗಾಂಧಿ ಆದರ್ಶ ಪರಿಹಾರ
ಗಾಂಧೀ ಜಯಂತಿ ಪ್ರಯುಕ್ತ ಗಾಂಧೀಜಿಯವರ ಪ್ರತಿಮೆಗೆ ಗೌರವ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.
Published On :

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು ಜಗತ್ತು ಕಂಡ ಶ್ರೇಷ್ಠ ಚಿಂತಕ ಮತ್ತು ದಾರ್ಶನಿಕ. ದೇಶ ಹಾಗೂ ಸಮಾಜಕ್ಕಾಗಿ ಹೋರಾಡಿದ ಅವರ ವಿಚಾರಧಾರೆಗಳು ದಿನೇ ದಿನೇ ಪ್ರಸ್ತುತವಾಗುತ್ತಿವೆ.

ಮಾತ್ರವಲ್ಲ ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕೂಡ ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶುಕ್ರವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನಾಚರಣೆ ಮತ್ತು ಗಾಂಧೀಜಿ ಭಾವಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದ ಯಾವುದೇ ದೇಶದಲ್ಲಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಉದಾಹರಣೆಗಳಿಲ್ಲ. ಆದರೆ ದೇಶಕ್ಕೆ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರಾಗಿದ್ದಾರೆ. ಗಾಂಧೀಜಿ ನಮ್ಮನ್ನು ಅಗಲಿದ್ದರೂ ಅವರ ವಿಚಾರಧಾರೆ ಸದಾ ಜೀವಂತವಾಗಿವೆ. ಅವರ ವಿಚಾರಗಳು ಪ್ರಸ್ತುತ ಅಷ್ಟೇ ಅಲ್ಲ, ಜಗತ್ತಿನ ಅನೇಕ ಸಮಸ್ಯೆ- ಗಳಿಗೆ ಪರಿಹಾರ ನೀಡಬಲ್ಲವು. ಗಾಂಧಿೀಜಿಯ ಆದರ್ಶಗಳನ್ನು ಪಾಲನೆ ಮಾಡದ ಕಾರಣ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.

ಪಾಲನೆ ಮಾಡದಿದ್ದರೆ ಸಮಸ್ಯೆ: `ಮಹಾತ್ಮ ಗಾಂಧೀಜಿ ಜಗತ್ತಿಗೆ ಅನಿವಾರ್ಯ, ಮರೆತರೆ ವಿಶ್ವದ ನಾಶ' ಎಂಬುದನ್ನು ಅಮೆರಿಕದ ಕಪ್ಪು ಜನಾಂಗದ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಹೇಳಿದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ `ಗಾಂಧೀಜಿ ಭಾರತಕಷ್ಟೇ ಸೀಮಿತವಲ್ಲ, ಅವರು ಜಗತ್ತಿಗೇ ನಾಯಕ' ಎಂಬ ಹೇಳಿಕೆಗಳು ಗಾಂಧೀಜಿಯ ಮೌಲ್ಯವನ್ನು ತಿಳಿಸುತ್ತವೆ. ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನಗಳನ್ನು ನಿರ್ಮಿಸಿ ಗಾಂಧೀಜಿಯ ವಿಚಾರಗಳನ್ನು ಯುವ ಜನತೆಗೆ ತಲುಪಿಸುವಂತಹ ಕಾರ್ಯವಾಗಬೇಕು. ಈ ಬಗ್ಗೆ ಗಾಂಧಿ ಪ್ರತಿಷ್ಠಾನದಿಂದ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ. ಪಾಟೀವ್
ಮಾತನಾಡಿದರು. ಜನಪದ, ಮಾರ್ಚ್ ಆಫ್ ಕರ್ನಾಟಕ, ಬಾಪು ಪ್ರಪಂಚ ವಿಶೇಷ ಸಂಚಿಕೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಸಚಿವರಾದ ರೋಷನ್ ಬೇಗ್, ಉಮಾಶ್ರೀ, ರಾಜಚಂದ್ರ ಪರಿಷತ್ತಿನ ಗುರುದೇವ ರಾಕೇಶ್ ಭಾಯಿ, ಡಾ.ಹೊ. ಶ್ರೀನಿವಾಸಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.