ಹಂಪಿ-ಅಮೆರಿಕ ನಡುವೆ ಪ್ರವಾಸೋದ್ಯಮ
ದಕ್ಷಿಣ ಅಮೆರಿಕದಲ್ಲಿರುವ ಅತ್ಯಂತ ಪ್ರೇಕ್ಷಣೀಯ ಸ್ಥಳವಾದ ಮಾಚುಪಿಚು ಹಾಗೂ ಕರ್ನಾಟಕದ ಹಂಪಿಯ ಮಧ್ಯೆ ಪ್ರವಾಸೋದ್ಯಮ ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಪೆರುವಿನ ರಾಯಭಾರಿ ಜೋಶ್ ಜೆ.ಜಿ. ತಿಳಿಸಿದ್ದಾರೆ...

ಬೆಂಗಳೂರು: ದಕ್ಷಿಣ ಅಮೆರಿಕದಲ್ಲಿರುವ ಅತ್ಯಂತ ಪ್ರೇಕ್ಷಣೀಯ ಸ್ಥಳವಾದ ಮಾಚುಪಿಚು ಹಾಗೂ ಕರ್ನಾಟಕದ ಹಂಪಿಯ ಮಧ್ಯೆ ಪ್ರವಾಸೋದ್ಯಮ ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಪೆರುವಿನ ರಾಯಭಾರಿ ಜೋಶ್ ಜೆ.ಜಿ. ತಿಳಿಸಿದ್ದಾರೆ.
ಕರ್ನಾಟಕದ ರೀತಿಯಲ್ಲಿ ಪೆರು ಕೂಡ ನಾಗರಿಕತೆ ತುಂಬಾ ಪ್ರಾಚೀನವಾದದ್ದು, ನಾವು ಕರ್ನಾಟಕ ಹಾಗೂ ಪೆರುವಿನ ಮಧ್ಯೆ ಸಾಂಸ್ಕೃತಿಕ ಸಂಬಂಧಗಳನ್ನು ಕಲ್ಪಿಸುವ ಜತೆಯಲ್ಲಿ ಬಂಡವಾಳ, ಗಣಿಗಾರಿಕೆಯನ್ನು ಉತ್ತಮಗೊಳಿಸಲು ಹೊರಟಿದ್ದೇವೆ. ಪೆರುವಿನಿಂದ ಕರ್ನಾಟಕ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಹಾಗೆಯೇ ಪೆರು ಇಲ್ಲಿಂದ ಜವಳಿ
ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಆದರೆ ಇನ್ನು ಉತ್ತಮ ಸಂಬಂಧ ಬೆಸೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಳೆ ಪೆರುವಿನ ರಾಷ್ಟ್ರಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ ಕರ್ನಾಟಕ ಹಾಗೂ ಪೆರುವಿನ ಮಧ್ಯೆ ಸರಳ ಉದ್ಯಮ ವಹಿವಾಟು ಒಪ್ಪಂದವನ್ನು ಸದ್ಯದಲ್ಲೇ ಕೈಗೊಳ್ಳಲಿದ್ದೇವೆ. ಸೋಲಾರ್ ಶಕ್ತಿ ಹಾಗೂ ಪವನ ವಿದ್ಯುತ್‍ಗೆ ಪೆರುವಿನಲ್ಲಿ ಸಾಕಷ್ಟು ಬೇಡಿಕೆಯಿದೆ ಅದಕ್ಕೂ ಹೆಚ್ಚು ಒತ್ತು ನೀಡಲಿದ್ದೇವೆ ಎಂದರು. ಭಾರತದ ರಾಯಭಾರಿ ವಿಕ್ರಂ ವಿಶ್ವನಾಥ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


