ನಿರ್ಮಾಪಕಿಗೆ ವಂಚನೆ ಆರೋಪ
'ನಾವೆಲ್ಲರೂ ಭಾರತೀಯರು'' ಚಲನಚಿತ್ರ ನಿರ್ಮಾಪಕಿ ಪುಷ್ಪಾ ಭದ್ರಾವತಿಯವರಿಗೆ ಜಯಸಿಂಹ ಮುಸುರಿಯವರು ಸ್ಯಾಟ್ ಲೈಟ್ ಪ್ರಸಾರದ ಹಕ್ಕಿನ...

ಬೆಂಗಳೂರು: 'ನಾವೆಲ್ಲರೂ ಭಾರತೀಯರು'' ಚಲನಚಿತ್ರ ನಿರ್ಮಾಪಕಿ ಪುಷ್ಪಾ ಭದ್ರಾವತಿಯವರಿಗೆ ಜಯಸಿಂಹ ಮುಸುರಿಯವರು ಸ್ಯಾಟ್ ಲೈಟ್ ಪ್ರಸಾರದ ಹಕ್ಕಿನ ವಿಚಾರದಲ್ಲಿ ವಂಚಿಸಿದ್ದಾರೆ ಎಂದು ಪುಷ್ಪಾ ಪರ ವಕೀಲೆ ರಶ್ಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರದ ಸ್ಯಾಟ್‍ಲೈಟ್ ಹಕ್ಕಿಗಾಗಿ ಶರತ್ ಎಂಟರ್‍ಪ್ರೈಸಸ್‍ನ ಕವಿತಾ ರಾವ್ 2008ರ ಮಾರ್ಚ್ 18ರಂದು ರು.75ಲಕ್ಷಗಳಿಗೆ ಬಾಯಿ ಮಾತಿನ ಮೂಲಕ ಒಪ್ಪಂದ ಮಾಡಿ ಕೊಂಡಿದ್ದರು. ಆದರೆ, ಇದುವರೆಗೆ ಕೇವಲ ರು.6ಲಕ್ಷ ಮಾತ್ರ ನೀಡಿದ್ದಾರೆ .
ಕವಿತಾ ರಾವ್ ಅವರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಜಯಸಿಂಹ ಮುಸುರಿಯವರು ಪುಷ್ಪಾ ಅವರಿಗೆ ಬಾಯಿ ಮಾತಿನ ಮೂಲಕ ಒಪ್ಪಂದ ಮಾಡಿಕೊಂಡು ಖಾಲಿ ಕಾಗದಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


