ಆಸ್ತಿಗಾಗಿ ಅಣ್ಣನನ್ನೇ ಮುಗಿಸಿದ ತಮ್ಮ
ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ...

Published On :
ಧಾರವಾಡ: ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ ಗ್ರಾಮದಲ್ಲಿ ಜರುಗಿದೆ.
ಈರಪ್ಪ ದೇಶಣ್ಣವರ (51) ಮೃತ ವ್ಯಕ್ತಿ. ಕೊಲೆ ತಾನೇ ಮಾಡಿದ್ದು ಎಂದು ಶೇಖಪ್ಪ ಒಪ್ಪಿಕೊಂಡಿದ್ದಾನೆ. ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ 20 ವರ್ಷಗಳಿಂದ ಈ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ.
ಆಸ್ತಿ ವಿಚಾರವಾಗಿ ಗ್ರಾಪಂನಲ್ಲಿ ರಾಜಿ ಸಂಧಾನವಾಗಿದ್ದರೂ, ಮರಳಿ ಮನೆಗೆ ಬಂದಾಗ ಸೈಕಲ್ ಚೈನ್ ನಿಂದ ಶೇಖಪ್ಪನ ಮೇಲೆ ಅಣ್ಣ ಹಲ್ಲೆ ಮಾಡಿದ್ದಾನೆ.
ಈ ವೇಳೆ ಶೇಖಪ್ಪ ಮತ್ತು ಆತನ ಮಗ ಸೇರಿ ಈರಪ್ಪನನ್ನು ಚೈನ್ ಸುತ್ತಿಸಿ ನೆಲಕ್ಕೆ ಕೆಡವಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಈ ವೇಳೆ ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


